ಇತ್ತೀಚಿನ ಸುದ್ದಿ
ಚಂಪಾ ಷಷ್ಠಿ ಮಹೋತ್ಸವ: ಕುಡುಪು ದೇವಳದಲ್ಲಿ ದೇವರ ಬಲಿ ಸೇವೆಯೊಂದಿಗೆ ಸಮಾಪನ
10/12/2021, 12:33

ಮಂಗಳೂರು(reporterkarnataka.com): ಕುಡುಪು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಚಂಪಾ ಷಷ್ಠಿ ಅಂಗವಾಗಿ ಗುರುವಾರ ಆರಂಭಗೊಂಡ ಮಹೋತ್ಸವ ಇಂದು ದೇವರ ಬಲಿಯೊಂದಿಗೆ ಸಮಾಪ್ತಿಗೊಂಡಿತು.
ಷಷ್ಠಿ ಮಹೋತ್ಸವದ ಅಂಗವಾಗಿ ಕುಡುಪು ದೇವಾಲಯದಲ್ಲಿ ನಿನ್ನೆ ವಿಶೇಷ ಪೂಜೆ ನಡೆಯಿತು. ಬೆಳಗ್ಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು. ಶುಕ್ರವಾರ ಜೋಡು ದೇವರ ಬಲಿ ಸೇವೆಯೊಂದಿಗೆ ಉತ್ಸವ ಸಮಾಪನಗೊಂಡಿತು.