ಇತ್ತೀಚಿನ ಸುದ್ದಿ
ಪುಲ್ಕೇರಿ ಲಕ್ಷ್ಮೀ ಸಭಾಭವನದಲ್ಲಿ ಉಪಾಹಾರ ಸೇವಿಸಿದ ಡಾ. ಸುಬ್ರಹ್ಮಣ್ಯನ್ ಸ್ವಾಮಿ
08/12/2021, 20:55

ಕಾರ್ಕಳ (reporterkarnataka.com): ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಹ್ಮಣ್ಯನ್ ಸ್ವಾಮೀ ಅವರು
ಬುಧವಾರ ಕಾರ್ಕಳಕ್ಕೆ ಭೇಟಿ ನೀಡಿದರು. ಮಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಅವರು ಕಾರ್ಕಳ ಬೈಪಾಸ್ ಪುಲ್ಕೇರಿ ಲಕ್ಷ್ಮೀ ಸಭಾಭವನದಲ್ಲಿ ಉಪಾಹಾರ ಸವಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನರಸಿಂಹ ಕಾಮತ್ ಸಾಣೂರು, ನವೀನ್ ನಾಯಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಸ್ವಾಮಿ ಅವರು ತನ್ನ ಕುಟುಂಬದವರೊಂದಿಗೆ ಶೃಂಗೇರಿಗೆ ತೆರಳಿದರು.