ಇತ್ತೀಚಿನ ಸುದ್ದಿ
ತಲಚೇರಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಏರಿಯಾ ಸಿ ವಿಭಾಗದ ಮಿಲನ ಸಮ್ಮೇಳನ: ಮಂಗಳೂರು ಲೀಜನ್ ಗೆ ಪ್ರಥಮ ಪ್ರಶಸ್ತಿ
07/12/2021, 10:05

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಏರಿಯಾ ಸಿ ವಿಭಾಗದ “ಮಿಲನ” ಸಮ್ಮೇಳನ ಕೇರಳದ ತಲಚೇರಿಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತಲಚೇರಿಯ ಆತಿಥ್ಯದಲ್ಲಿ ನಡೆಯಿತು.
ಕೇರಳ ಮತ್ತು ಕರ್ನಾಟಕ ರಾಜ್ಯದ ಸುಮಾರು 25 ಘಟಕಗಳ ಸಮ್ಮೇಳನದ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಪಡೆದುಕೊಂಡಿತು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದ ರಾವ್ ಕೇದಿಗೆ ಪ್ರಥಮ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. Excellent story ಅವಾರ್ಡ್ ಮತ್ತು ವಿಶೇಷ ಪ್ರಶಸ್ತಿಯನ್ನು ಎಸ್ ಸಿಐ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ ಕಾರಮೊಗರು ಗುತ್ತು ಪಡೆದುಕೊಂಡರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಪ್ರಾಂತ್ಯ ಸಿ ಯ ಪ್ರದೀಪ್ ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ ನಿಕಟಪೂರ್ವ ಅಧ್ಯಕ್ಷ ಕೆ.ಮಹಮ್ಮದ್ ಕೋಯಾ, ರಾಷ್ಟ್ರೀಯ ಕೋಶಾಧಿಕಾರಿ ಸಿ.ಎಸ್. ಎಲ್. ಜೋಸ್ ಕಂಡೋತ್, ಮ್ಯಾನೇಜ್ಮೆಂಟ್ ವಿಭಾಗದ ರಾಜೇಶ್ ವೈಭವ್, ಗ್ರೌತ್ ಅಂಡ್ Dev ನ ನಿರ್ದೇಶಕ ಚಿತ್ರ ಕುಮಾರ್, ಎಸ್ ಸಿಐ ತಲಚೇರಿಯ ಅಧ್ಯಕ್ಷ ರಾಜೀವಿ, ಕಾರ್ಯಕ್ರಮ ಸಂಯೋಜಕ ಕೆ. ಅನುಪ್, ಎಸ್ ಸಿಐ ಮಂಗಳೂರಿನ ಕಾರ್ಯದರ್ಶಿ ಶಾಲಿನಿ ಪ್ರಶಾಂತ ಸುವರ್ಣ, ಉಪಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್, ಪ್ಲೇವಿ ಡಿಮೆಲ್ಲೋ, ಪ್ರಶಾಂತ್ ಸುವರ್ಣ, ಲತಾ ಕಲ್ಲಡ್ಕ ಲತಾ ಕರ್ಕೇರ , ಮಾಲತಿ ಶೆಟ್ಟಿ, ಸುಬ್ರಮಣ್ಯ ಸಾಲ್ಯಾನ್, ಮನಿಷ್ ಕೃಷ್ಣ ಕಲ್ಲಡ್ಕ, ಸೀನಿಯರೇಟ್ ಕಾರ್ಯದರ್ಶಿ ನಿರ್ಮಲ ಪ್ರಮೋದ್, ಉಷಾ ಶೆಟ್ಟಿ, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.