ಇತ್ತೀಚಿನ ಸುದ್ದಿ
ಚಳ್ಳಕೆರೆ: ಶಿಥಿಲಗೊಂಡ ಚಿಕ್ಕ ಮಧುರೆ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡದ ಗೋಡೆ ಕುಸಿತ; ತಪ್ಪಿದ ಮಹಾ ದುರಂತ
05/12/2021, 18:52
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಅರ್ಧ ಶತಮಾನದ ಪೂರೈಸಿದ ಬಹುತೇಕ ಸರಕಾರಿ ಶಾಲಾ ಕಟ್ಟಡಗಳು ಜೀರ್ಣೋದ್ದಾರ ಕಾರಣದೆ ಗೋಡೆಗಳು ಬಿರುಕು ಬಿಟ್ಟು ಸೋರುತ್ತಿರುವುದರಿಂದ ಜೀವ ಭಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಆಟ, ಪಾಠ ಕೇಳುವ ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ.
ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಚಿಕ್ಕ ಮಧುರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ರಿಂದ ೭ ನೇ ತರಗತಿಯವರೆಗೆ ಅಕ್ಷರ ಜ್ಞಾನ ಕಲಿಯಲು ೮೦ ವಿದ್ಯಾರ್ಥಿಗಳು ಬರುತ್ತಿದ್ದು ೬ ಕೊಠಡಿಗಳಿಗೆ ಅವುಗಳಲ್ಲಿ ಮೂರು ಶಿಥಿಲವಾಗಿ ಗೋಡೆಗಳು ಬಿರುಕುಬಿಟ್ಟಿದೆ. ವಿದ್ಯಾರ್ಥಿಗಳು
ಜೀವ ಭಯದಲ್ಲೇ ಕೊಠಡಿಯಲ್ಲಿ ಕುಳಿತು ದಿನಾ ವಿದ್ಯಾಭ್ಯಾಸ ಕಲಿಯ ಬೇಕಾದ ಅನಿವಾರ್ಯತೆ ಇದೆ.
ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಶಾಲಾ ಕೊಠಡಿದ್ದ ದಿಢೀರ್ ಕುಸಿದು ಬಿದ್ದಿದೆ. ಸದ್ಯ ಶಾಲಾ ಆವಧಿ ಮುಗಿದ ಕಾರಣ ಪೋಷರಲ್ಲಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರಲ್ಲಿ ಆತಂಕದ ವಾತಾವರಣವಾಗಿದ್ದು ಒಂದು ವೇಳೆ ಶಾಲಾ ಅವಧಿಯಲ್ಲಿ ಕಟ್ಟಡ ಕುಸಿದಿದ್ದರೆ ಗತಿ ಏನು ಎಂದು ಪೋಷರ ಭೀತಿ ಎದುರಾಗಿದೆ.
ತಾಲೂಕಿನಾದ್ಯಂತ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಸರಕಾರಿ ಶಾಲೆಗಳು ಮಳೆಗೆ ಸೋರುತ್ತಿರುವುದರಿಂದ, ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಮೇಲ್ಚಾವಣಿಯ ಬಹುತೇಕ ತೊಲೆಗಳು ಮುರಿದಿವೆ. ಯಾವುದೇ ಸಂದರ್ಭದಲ್ಲಿ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಶಿಥಿಲವಾರ ಕೊಠಡಿಗಳ ಬಾಗಿಲು ಮುಚ್ಚಲಾಗಿದ್ದು ಶಾಲಾ ಆವರಣದಲ್ಲಿ ಮರದ ಕೆಳಗೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಸರಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ಹಂತದಲ್ಲಿದ್ದು, ಪೋಷಕರು ಆತಂಕದಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಬಹುತೇಕ ಪೋಷಕರು ಕಟ್ಟಡ ಕುಸಿಯುವ ಆತಂಕದ ನಡುವೆಯೂ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಾರೆ.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ನಿಜಲಿಂಗಪ್ಪ ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿ, ನಾನು ಪ್ರತಿ ನಿತ್ಯ ಶಾಲಾ ಆವರಣಕ್ಕೆ ಬಂದು ಇಲ್ಲಿನ ಕಲಿಕಾ ಬಗ್ಗೆ ವಿಚಾರಣೆ ಮಾಡುತ್ತೇನೆ. ಗೋಡೆಗಳು ಬಿರುಕು ಬಿಟ್ಟ ಶಾಲಾ ಕೊಠಡಿಗಳಲ್ಲಿ ಶಿಕ್ಷರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿರುವ ದೃಶ್ಯ ಕಂಡು ಮಕ್ಕಳಿಗೆ ಕೊಠಡಿಯಲ್ಲಿ ಕೂರಿಸ ಬೇಡಿ ಶಾಲಾ ಆವರಣದಲ್ಲಿ ಮರದ ಕೆಳಗೆ ಕುಳಿಸಿ ಪಾಠ ಮಾಡಿ ಎಂದು ಸಲಹೆ ನೀಡಿದ್ದೆ. ಅಕಾಲಿಕ ಮಳೆಯಿಂದ ಶುಕ್ರವಾರ ಶಾಲಾ ಕೊಠಡಿಯ ಗೋಡೆ
ಕುಸಿದಿದೆ. ಇದರಿಂದ ಗ್ರಾಮದಲ್ಲಿ ಪೋಷಕರಲ್ಲಿ ಆತಂಕ ಮೂಡಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಶಾಲಾ ಕಟ್ಟಡ ದುರಸ್ತಿಗೆ ಮುಂದಾಗ ಬೇಕಿದೆ ಎಂದು ತಿಳಿಸಿದರು.