8:03 PM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಗುಜ್ಜರಕೆರೆ: ಯೆನಪೊಯ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ಬಿಡಿಸಲು ಬಂದ ಪೊಲೀಸರ ಮೇಲೂ ಹಲ್ಲೆ; 12 ಮಂದಿಗೆ ಗಾಯ

03/12/2021, 16:10

ಮಂಗಳೂರು(reporterkarnataka.com):

ನಗರದ ಮಂಗಳಾದೇವಿ ಬಳಿಯ ಐತಿಹಾಸಿಕ ಗುಜ್ಜರಕೆರೆ ಸಮೀಪದಲ್ಲಿರುವ ಯೆನಪೊಯ ಶಿಕ್ಷಣ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಗಲಾಟೆ ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ. ಈ ಸಂಬಂಧ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ 7 ಮಂದಿ ವಿದ್ಯಾರ್ಥಿಗಳು ಹಾಗೂ  5 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ 7 ಗಂಟೆಯ ವೇಳೆಗೆ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕಿತ್ತಾಟ ಆರಂಭವಾಗಿದ್ದು, 10ರ ಸುಮಾರಿಗೆ ಇದು ತಾರಕಕ್ಕೇರಿತ್ತು. ವಿದ್ಯಾರ್ಥಿಗಳ ಗಲಾಟೆ, ಗದ್ದಲ, ಬೊಬ್ಬೆ ಪರಿಸರದ ಶಾಂತಿ ಕದಡಿದ್ದು, ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.

ರಾತ್ರಿ ಸುಮಾರು 10 ಗಂಟೆ ಬಳಿಕ ಪಿಎಸ್‌ಐ ಹಾಗೂ

ಸಿಬ್ಬಂದಿಗಳು ಹಾಸ್ಟೆಲ್ ಗೆ ಹೋದಾಗ ಹಾಸ್ಟೆಲ್ ನ ಕೆಲವು ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ. ಫಹಾದ್, ಅಬು ತಹರ್, ಮೊಹಮ್ಮದ್ ನಾಸಿಪ್, ಆದರ್ಶ ದಸ್ತಗಿರಿಯಾದ ಆರೋಪಿಗಳು ಎಂದು ಎನ್ನಲಾಗಿದೆ.

ಗುರುವಾರ ಸಂಜೆ 7 ಗಂಟೆಯ ವೇಳೆಗೆ ಮೂರನೇ ವರ್ಷದ ಬಿಎಸ್ ಸಿ ಹಾಸ್ಪಿಟಾಲಿಟಿ ಸೈನ್ ಕಲಿಯುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ತನ್ನ ಸ್ನೇಹಿತ ಅಭಿರಾಮಿಯನ್ನು ಭೇಟಿ ಮಾಡಿ ಮಾತನಾಡಿಸುವಾಗ ಸಿನಾನ್ ಹಾಗೂ ಇತರ 8 ಜನ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಆದರ್ಶ್ ಪ್ರೇಮಕುಮಾರ್ ಎಡಕೈ ಪ್ರಾಕ್ಟರ್‌ ಆಗಿದ್ದು, ಮೊಹಮ್ಮದ್ ನಸಿಪ್ ಗೆ ಗಾಯವಾಗಿದೆ. ಗಲಾಟೆ ಬಿಡಿಸಲು ಬಂದಿದ್ದ ಸ್ನೇಹಿತರಿಗೆ ಶನಿನ್ ಮತ್ತು ಶ್ರವಣ್ ರಿಗೆ ಆರೋಪಿಗಳು ಜೀವ ಬೆದರಿಕೆ ಒಡ್ಡಿರುವುದಾಗಿ ಆದರ್ಶ ದೂರು ನೀಡಿದ್ದಾನೆ. 7 ಗಂಟೆಗೆ ಆರಂಭವಾದ ವಿದ್ಯಾರ್ಥಿಗಳ ನಡುವಿನ ಘರ್ಷಣೆ ಮತ್ತೆ ತಾರಕಕ್ಕೇರಿತು.

ಹಾಸ್ಟೆಲ್ ನಲ್ಲಿ ಬಹುತೇಕ ಕಾಸರಗೋಡು ಜಿಲ್ಲೆ ಹೊರತುಪಡಿಸಿ ಕೇರಳದ ಇತರ ಜಿಲ್ಲೆಗಳ ವಿದ್ಯಾರ್ಥಿಗಳು ವಾಸ್ತವ್ಯ ಹೊಂದಿದ್ದಾರೆ. 

ಸುಮಾರು 10 ದಿನಗಳ ಹಿಂದೆ ಇದೇ ಹಾಸ್ಟೆಲ್ ನ ವಿದ್ಯಾರ್ಥಿಗಳು ಸ್ಥಳೀಯರ ಜತೆ ಗಲಾಟೆ ನಡೆಸಿದ್ದರು. ಹಾಸ್ಟೆಲ್ ನ ಕೆಲವು ವಿದ್ಯಾರ್ಥಿಗಳು ಸ್ಥಳೀಯ ಹುಡುಗಿಯರಿಗೆ ಚುಡಾಯಿಸುವುದು, ಕಿರುಕುಳ ನೀಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುಜ್ಜರಕೆರೆ ಬಳಿ ಬಂದು ಸಿಗರೇಟ್ ಸೇದಿ ಅದರ ಅವಶೇಷಗಳನ್ನು ಕೆರೆಗೆ ಎಸೆಯುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ಶಾಸಕ ಡಿ. ವೇದವ್ಯಾಸ ಕಾಮತ್ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು