ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ
02/12/2021, 21:59
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನವನ್ನು ಮಂಗಳೂರಿನಲ್ಲಿ ವಾಸಿಸುತ್ತಿರುವ ಹಾವೇರಿ ನಿವಾಸಿಯಾದ ಚಂದ್ರಯ್ಯ ಮಠದ ಅವರಿಗೆ ಹಸ್ತಾಂತರಿಸಲಾಯಿತು.
ಕಾಲಿನ ಸ್ವಾಧೀನ ಕಳೆದುಕೊಂಡು ಅನಾರೋಗ್ಯ ದಿಂದ ಬಳಲುತ್ತಿದ್ದ ಅವರಿಗೆ ನೆರವಿನ ಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ಚಂದ್ರಯ್ಯ ಮಠದ ಅವರ ಸಂಬಂಧಿಕರಾದ
ಮಹಂತೇಶ್, ಅವರ ಮಗ, ಸೊಸೆ, ಅಮ್ಮ ಹಾಗೂ ಆರದಿರಲಿ ಬದುಕು ತಂಡದ ದೇವಿಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ ಐಕಳ, ನಾಗರಾಜ ಶೆಟ್ಟಿ ಅಂಬೂರಿ, ನವೀನ್ ಪುತ್ತೂರು, ವಿವೇಕ್ ಪ್ರಭು, ಶ್ರೀನಿವಾಸ ಬಜಪೆ, ಪ್ರಸಾದ್ ಉಡುಪಿ, ರಂಗನಾಥ್ ಪಕ್ಷಿಕೆರೆ,ನೀಲೇಶ್, ಗಣೇಶ್ ಪೈ, ಪದ್ಮಶ್ರೀ ಭಟ್ ನಿಡ್ಡೋಡಿ,ರಂಜಿತ್ , ಲೀಲೇಶ್ , ಸುದರ್ಶನ್ ಎಂ., ದಿನೇಶ್ ಸಿದ್ದಕಟ್ಟೆ, ರಾಕೇಶ್ ಪೊಳಲಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು














