9:46 PM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಹೆತ್ತವರು ಮದುವೆ ಮಾಡಿಸದ ಬೇಸರ: ನೇಣು ಬಿಗಿದು ಪ್ರೇಮಿಗಳು ಆತ್ಮಹತ್ಯೆ 

02/12/2021, 21:51

ಮೈಸೂರು(reporterkarnataka.com:

ಪೋಷಕರು ಮದುವೆ ಮಾಡಿಸದ ಬೇಸರದಿಂದ ಯುವ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಪ್ರೇಮಿಗಳಾದ ಬಿ.ಜಿ.ಸತೀಶ್ (21) ಬಿ.ಜಿ.ವರಲಕ್ಷ್ಮಿ (20) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. 

ಸತೀಶ್ ಹಾಗೂ ವರಲಕ್ಷ್ಮೀ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ಸರ್ಕಾರಿ ಕೆಲಸದ ನಂತರ ಮದುವೆ ಮಾಡುವುದಾಗಿ ಹುಡುಗಿ ಮನೆಯವರು ಹೇಳಿದ್ದರು. ಬಿಎ ಓದಿದ್ದ ಯುವಕ ಪೊಲೀಸ್ ಕೆಲಸಕ್ಕೆ ಸೇರುವ ಯತ್ನ ಮಾಡುತ್ತಿದ್ದನು. ಯುವತಿ ನರ್ಸಿಂಗ್ ಓದುತ್ತಿದ್ದಳು.

ಕೆಲಸ ಸಿಕ್ಕ ನಂತರ ಮದುವೆ ಮಾಡುವುದಾಗಿ ಹುಡುಗಿ ತಂದೆ ಸಿದ್ದಲಿಂಗ ನಾಯ್ಕ ತಾಕೀತು ಮಾಡಿದ್ದರು. ಪೋಷಕರ ನಡೆಗೆ ಬೇಸೆತ್ತು ಮೈಸೂರಿಗೆ ಆಗಮಿಸಿದ್ದ ಪ್ರೇಮಿಗಳು ಮಂಗಳವಾರ ನಗರದಲ್ಲಿರುವ ಸಂಜೆ ಲಾಡ್ಜ್ವೊಂದರಲ್ಲಿ ರೂಂ ತೆಗೆದುಕೊಂಡಿದ್ದರು. ರಾತ್ರಿಯೂ ಹೊರ ಬಂದಿರಲಿಲ್ಲ. ಬೆಳಿಗ್ಗೆಯೂ ಹೊರ ಬಾರದ ಹಿನ್ನಲೆ, ರೂಮ್ ಬಳಿ ತೆರಳಿ ನೋಡಿದಾಗ ಇಬ್ಬರೂ ಸೀಲಿಂಗ್ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಕುರಿತು ಲಾಡ್ಜ್ ಮಾಲೀಕ ಲಷ್ಕರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಲಷ್ಕರ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು