5:36 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ನವೆಂಬರ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಪ್ರಥಮ್ ಮಂಗಳೂರು ಹಾಗೂ ಧನ್ವಿ ರೈ ಕೋಟೆ ಆಯ್ಕೆ

29/11/2021, 12:49

ಮಂಗಳೂರು(reporterkarnataka.com):ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಪ್ರಥಮ್ ಮಂಗಳೂರು ಹಾಗೂ ಧನ್ವಿ ರೈ ಕೋಟೆ ಆಯ್ಕೆಗೊಂಡಿದ್ದಾರೆ.

ಪ್ರಥಮ್ ಮಂಗಳೂರು ಅವರು ಪೂರ್ಣಿಮಾ ಹಾಗೂ ಗಿರೀಶ್ ದಂಪತಿಯ ದ್ವಿತೀಯ ಪುತ್ರ. ಪ್ರಸ್ತುತ ಕುಲಶೇಖರದ ಸೇಕ್ರೆಟ್ ಹಾರ್ಟ್ ಹೈಯರ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಸಂಗೀತ, ಡೈಲಾಗ್  ಹೇಳುವುದು ಮತ್ತು ಸ್ಪೋರ್ಟ್ಸ್ ಇವನ ಹವ್ಯಾಸ. ಸಂಗೀತದಲ್ಲಿ ಹಲವಾರು ಬಹುಮಾನ ಪಡೆದಿರುತ್ತಾನೆ. ಕಲ್ಕೂರ ಪ್ರತಿಷ್ಠಾನ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣವೇಷ ಸ್ಪರ್ಧೆ 2021 ಸಾಲಿನ ಛಾಯಾ ಕೃಷ್ಣ ಸ್ಪರ್ಧೆಯಲ್ಲಿ ತೃತೀಯ ಹಾಗೂ ವಾಯ್ಸ್ ಆಫ್ ಆರಾಧನಾ ಕೃಷ್ಣ ವೇಷ ಸ್ಪರ್ಧೆ ಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ.

ಇತ್ತೀಚಿಗಿನ ದಿನಗಳಲ್ಲಿ ಎಡಿಟಿಂಗ್ ನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾನೆ. ಕಾರ್ಕಳ ಅಜೆಕಾರ್ ನಲ್ಲಿ ನಡೆದ ಆದಿ ಗ್ರಾಮೋತ್ಸವದಲ್ಲಿ ಬಾಲ ಪ್ರತಿಭೆ ಗೌರವವನ್ನು ಪಡೆದು ಕೊಂಡಿರುತ್ತಾನೆ. ಸ್ಪಂದನ ವಾಹಿನಿಯಲ್ಲಿ ಕಿನ್ನರ ಮೇಳ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾನೆ. ವಾಯ್ಸ್ ಆಫ್ ಆರಾಧನಾದಲ್ಲಿ ಜುಲೈ ತಿಂಗಳ ಬೆಸ್ಟ್ ಪರ್ಫಾರ್ಮೆನ್ಸ್ ಬಹುಮಾನ ಪಡೆದಿರುತ್ತಾನೆ.

ಇನ್ನು ಧನ್ವಿ ರೈ ಕೋಟೆ ರವಿಶಂಕರ್ ರೈ  ಕೆ. ಹಾಗೂ ವಿಜಯಲಕ್ಷ್ಮೀ ರೈ ಕೆ. ಅವರ ಪುತ್ರಿ. ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕೋಟೆಯ ನಿವಾಸಿ.ಕೇವಲ 11 ವರ್ಷ ವಯಸ್ಸಿನ ಧನ್ವಿ ಪಾಣಾಜೆಯ ವಿವೇಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಳೆ.

ಧನ್ವಿಯು ಪ್ರತಿಭಾ ದೀಪ ಪುರಸ್ಕೃತೆ,ಯಕ್ಷಗಾನ,ನೃತ್ಯ, ಭಾಷಣ, ಚಿತ್ರ ರಚನೆಯಲ್ಲಿ ಹಲವು ಪ್ರಶಸ್ತಿ ಪತ್ರ ಪಡೆದಿದ್ದಾಳೆ. 60ಕ್ಕಿಂತಲೂ ಹೆಚ್ಚು ಪ್ರದರ್ಶನ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನದಲ್ಲಿ ಪ್ರತಿ ದಿನ ಟಾಸ್ಕ್ ನಲ್ಲಿ ಭಾಗವಹಿಸುತ್ತಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು