ಇತ್ತೀಚಿನ ಸುದ್ದಿ
ಮಂಗಳೂರು: ಕರಾವಳಿ ಜಾನಪದ ಪರಿಷತ್ತು ದ. ಕ. ಜಿಲ್ಲಾ ಘಟಕ ವತಿಯಿಂದ ನಾಳೆ ಕಾರ್ಯಕ್ರಮ
27/11/2021, 20:09
ಮಂಗಳೂರು(reporterkarnataka.com): ಕರಾವಳಿ ಜಾನಪದ ಪರಿಷತ್ತು ದ. ಕ. ಜಿಲ್ಲಾ ಘಟಕದ ವತಿಯಿಂದ ಇದೇ ನವೆಂಬರ್
28ರಂದು ಸಂಜೆ 5 ಗಂಟೆಗೆ ನಗರದ ಹೋಟೆಲ್ ಓಶಿಯನ್ ಪರ್ಲ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಭೆಯ ಅಧಕ್ಷತೆಯನ್ನು ರಾಜ್ಯಾಧ್ಯಕ್ಷ ತಿಮ್ಮಗೌಡರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ
ಕೋಶಾಧಿಕಾರಿಗಳಾದ ತಾರಾನಾಥ್ ಶೆಟ್ಟಿ ಬೋಳಾರ್, ಉಳ್ಳಾಲ ವಲಯಧ್ಯಕ್ಷ ಅರುಣ್ ಉಳ್ಳಾಲ್, ಜಾನಪದ ಕಲಾವಿದ ಉಮೇಶ್ ಪದವಿನಂಗಡಿ ಅವರುಗಳಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ.
ಸಮಿತಿ ಸದಸ್ಯರು ಹಾಗೂ ವಲಯದ ಅಧ್ಯಕ್ಷರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ (ಪಮ್ಮಿ)ಕೊಡಿಯಾಲ್ ಬೈಲ್ ವಿನಂತಿಸಿದ್ದಾರೆ.














