11:20 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಮುಂಗಾರು ಬಿತ್ತನೆಗೆ ಅನ್ನದಾತ ಸಜ್ಜು: ಬಿತ್ತನೆ ಬೀಜಕ್ಕೆ ಪ್ರಸ್ತಾವನೆ; ಇಂದಿನ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಸೂಚನೆ

31/05/2021, 07:11

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಕೋವಿಡ್ ಸಮಯದಲ್ಲೂ ಕೃಷಿ ಚಟುವಟಿಕೆ ಗ್ರಾಮೀಣ ಭಾಗದಲ್ಲಿ ಗರಿಗೆದರಿವೆ. ಮುಂಗಾರು ಹಂಗಾಮಿನ ಹೊಲಗಳನ್ನು ಹದಗೊಳಿಸು ಕಾರ್ಯ ಅದ್ಭುತವಾಗಿ ನಡೆದಿದೆ. ಬಿತ್ತನೆ ಬೀಜಗಳ ಪೂರೈಕೆಗೆ ಈಗಾಗಲೇ ಕೃಷಿ ಇಲಾಖೆ ಕಳಿಸಲಾಗಿದೆ. ಕೃಷಿ ಇಲಾಖೆ ಪ್ರಸ್ತಾವನೆ ಪ್ರಕಾರ ಬೀಜ ಪೂರೈಕೆ ಆಗಲಿದೆ. 

ಈ ನಡುವೆ ಇಂದಿನ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಜೂನ್ ಮೊದಲನೇ ವಾರ ಬರುವ ಮುಂಗಾರುನಲ್ಲೂ ಉತ್ತಮ ಮಳೆ ಆಗುವ ಲಕ್ಷಣಗಳು ಕಂಡು ಬಂದಿವೆ. ಕೊರೊನಾ ಎರಡನೆಯ ಲಾಕ್ ಡೌನ್  ರೈತರನ್ನು ಸ್ವಲ್ಪ ಕಷ್ಟಕ್ಕೆ ಸಿಲುಕಿಸಿದೆ. ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. 

ರಸಗೊಬ್ಬರವನ್ನು ಇಂದಿನ ದರದಲ್ಲಿ ಮಾರಾಟ ಮಾಡಲು ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಸಹಾಯಕ ಕೃಷಿ ನಿರ್ದೇಶಕಿ ಡಾ. ಎಸ್ ಪ್ರಿಯಾಂಕ,

ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳು ಬಿತ್ತನೆ ಕುರಿತು ಬೀಜಗಳನ್ನು ಪೂರೈಕೆ ಪ್ರಸ್ತಾವನೆಗೆ ಕಳಿಸಿಕೊಡಲಾಗಿದೆ.

ರಸಗೊಬ್ಬರವನ್ನು ಇಂದಿನ ದರದಲ್ಲಿ ಮಾರಾಟ ಮಾಡಲು ಅಂಗಡಿ ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿದೆ. ಮಾರಾಟ ದರ ಪಟ್ಟಿ ಹಾಕಿ ಕೋವಿಡ್ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಹೇಳಲಾಗಿದೆ.

ಈ ನಡುವೆ ಮಸ್ಕಿ ಕ್ಷೇತ್ರದ ಅಂತರಗಂಗೆ, ಮೆದಿಕಿನಾಳ, ಅಂಕುಶದೊಡ್ಡಿ, ತಲೆಕಾನ್ , ಗುಡದೂರು, ಹಂಪನಾಳ, ನಾಗರಬೆಂಚಿ ಸುತ್ತಮುತ್ತಲಿನ ಗ್ರಾಮಸ್ಥರು ಮುಂಗಾರು ಬಿತ್ತನೆಗಾಗಿ ಭರ್ಜರಿ ಹೊಲಗಳ ಹದ ಮಾಡಿ ಕೆಲಸ ಮಾಡುವ ದೃಶ್ಯ ಕಂಡುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು