ಇತ್ತೀಚಿನ ಸುದ್ದಿ
8ರ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: 4 ಮಂದಿ ಬಂಧನ; ತುಟಿ ಬಿಚ್ಚದ ಬಿಜೆಪಿ, ಕಾಂಗ್ರೆಸ್ ನಾಯಕಿಯರು!
24/11/2021, 17:01
ಮಂಗಳೂರು(reporterkarnataka.com): ನಗರದ ಹೊರವಲಯದ ಪರಾರಿಯಲ್ಲಿ 8ರ ಹರೆಯದ ಪುಟ್ಟ ಬಾಲಕಿಯ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲೋ ಉತ್ತರ ಭಾರತ ಕಡೆ ಅತ್ಯಾಚಾರ ನಡೆದರೆ ರಾಜಕೀಯ ಲಾಭಕ್ಕಾಗಿ ಬೀದಿಗಿಳಿದು ಕಿರುಚಾಡುವ ಬಿಜೆಪಿ ಮತ್ತು ಕಾಂಗ್ರೆಸ್ ನ ಮಹಿಳಾ ನಾಯಕಿಯರು ಈ ಕುರಿತು ತುಟಿ ಬಿಚ್ಚದೆ ಮೌನವಹಿಸಿದ್ದಾರೆ.
ಝರ್ಖಾಂಡ್ ನಿಂದ ಕೂಲಿ ಕೆಲಸಕ್ಕೆ ಬಂದ ನಾಲ್ವರು ಆರೋಪಿಗಳು ಬಾಲಕಿಯ ಮೇಲೆ ಮೃಗೀಯಾಗಿ ಅತ್ಯಾಚಾರ ನಡೆಸಿ, ಬಳಿಕ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು
ಜೈಬಾನ್ ಅಲಿಯಾಸ್ ಜೈ ಸಿಂಗ್, ಮುಕೇಶ್ ಸಿಂಗ್, ಮನೀಶ್ ಟಿರ್ಕಿ ಹಾಗೂ ಮುನೀಮ್ ಸಿಂಗ್ ಎಂದು ಗುರುತಿಸಲಾಗಿದೆ.
8ರ ಹರೆಯದ ಬಾಲಕಿಗೆ ಚಾಕಲೇಟ್ ಹಾಗೂ ಸಿಹಿ ತಿಂಡಿಯ ಆಸೆ ತೋರಿಸಿ ಬಂಧಿತ ಆರೋಪಿಗಳಲ್ಲಿ ಇಬ್ಬರು ಈ ಹಿಂದೆ 3-4 ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ತಿಳಿದು ಬಂದಿದೆ.
ಈ ಇಬ್ಬರು ಕಾಮುಕರ ಜತೆ ಭಾನುವಾರ ದಿನ ಮತ್ತಿಬ್ಬರು ಜತೆ ಸೇರಿ ಅತ್ಯಾಚಾರ ಮಾಡಿದ್ದಾರೆ.
ಬಾಲಕಿಗೆ ಸಿಕ್ಕಾಪಟ್ಟೆ ರಕ್ತಸ್ರಾವವಾದಾಗ ಸಿಕ್ಕಿಬೀಳಬಹುದು ಎಂಬ ಭಯದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.