9:06 PM Sunday12 - January 2025
ಬ್ರೇಕಿಂಗ್ ನ್ಯೂಸ್
ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ 5 ವರ್ಷಗಳಲ್ಲಿ 50,000 ಕೋಟಿ ಹೂಡಿಕೆ… ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ

ಇತ್ತೀಚಿನ ಸುದ್ದಿ

6000 ಸದಸ್ಯರ ಸಂಖ್ಯೆ ದಾಟಿದ ಯುಎಸ್‍ಟಿ ಬೆಂಗಳೂರು: ಮುಂದಿನ 2 ವರ್ಷಗಳಲ್ಲಿ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಯೋಜನೆ

24/11/2021, 15:12

ಬೆಂಗಳೂರು(reporterkarnataka.com): ಮುಂಚೂಣಿಯ ಡಿಜಿಟಲ್ ಪರಿವರ್ತನೆ ಪರಿಹಾರಗಳ ಕಂಪನಿಯಾದ ಯುಎಸ್‍ಟಿ ತನ್ನ ಬೆಂಗಳೂರು, ಕರ್ನಾಟಕ ಕೇಂದ್ರದಲ್ಲಿ ಕಾರ್ಯಪಡೆಯನ್ನು 6000 ಉದ್ಯೋಗಿಗಳಿಗೂ ಹೆಚ್ಚಾಗಿ ವಿಸ್ತರಿಸುವುದನ್ನು ಪ್ರಕಟಿಸಿದೆ. 

ಫೆಬ್ರವರಿ 2020ರಿಂದ ಅಂದರೆ ಕೊರೊನಾ ನಂತರದ ಅವಧಿಯಲ್ಲಿ ಕಂಪನಿಯು 2000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಹೆಚ್ಚಿನ ವೇಗದ ಬೆಳವಣಿಗೆಯ ಕಂಪನಿ ಯೋಜನೆಗೆ ಅನುಗುಣವಾಗಿ ಯುಎಸ್‍ಟಿ ಬೆಂಗಳೂರು ಸೆಂಟರ್ 2023ರ ಹೊತ್ತಿಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿ 12,000ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ.

ಜಾಗತಿಕ ತಂತ್ರಜ್ಞಾನ ಕಂಪನಿ ಇದಾಗಿದ್ದು, ಭಾರತದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಆಕರ್ಷಿಸಲು ತನ್ನ ಸ್ವದೇಶಿ ಹಾಜರಿಯನ್ನು ವಿಸ್ತರಿಸುವ ಯೋಜನೆ ಮಾಡಿಕೊಳ್ಳುತ್ತಿದೆ. ಮುಂದಿನ 18-24 ತಿಂಗಳುಗಳಲ್ಲಿ ಬೆಂಗಳೂರು ಕೇಂದ್ರ ಹೊಸ ಪದವೀಧರರನ್ನು(ಇಂಜಿನಿಯರ್ ಪದವಿಧರರು) ಮತ್ತು ಅನುಭವಿ ಇಂಜಿನಿಯರ್‍ಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲಿದೆ. ಆರೋಗ್ಯ ಸೇವೆ, ತಂತ್ರಜ್ಞಾನ, ಸಾರಿಗೆ, ಸೆಮಿಕಂಡೆಕ್ಟರ್‍ಗಳು ಮತ್ತು ಬಿಎಫ್‍ಎಸ್‍ಐ(ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಮತ್ತು ವಿಮೆ) ಗ್ರಾಹಕರಿಗಾಗಿ ಉತ್ಪನ್ನ ಮತ್ತು ಸೇವೆಗಳ ಮೇಲೆ ಗಮನ ಕೇಂದ್ರೀಕರಿಸಿ ಉದ್ಯೋಗಿಗಳ ನೇಮಕಾತಿ ಕೈಗೊಳ್ಳಲಾಗುತ್ತಿದೆ.

ಯುಎಸ್‍ನ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಜೊತೆಗೆ 25ಕ್ಕೂ ಹೆಚ್ಚಿನ ದೇಶಗಳಲ್ಲಿ 35ಕ್ಕೂ ಹೆಚ್ಚಿನ ಕಚೇರಿಗಳನ್ನು ಹೊಂದಿರುವ ಯುಎಸ್‍ಟಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕಂಪನಿಯಾಗಿದೆ. ವಿಶ್ವವ್ಯಾಪಿಯಾಗಿ ಗ್ಲೋಬಲ್ 2000 ಮತ್ತು ಫಾರ್ಚೂನ್ 500 ಉದ್ಯಮಗಳಿಗೆ ಅತ್ಯಾಧುನಿಕ ಡಿಜಿಟಲ್ ಪರಿವರ್ತನಾ ಸೇವೆಗಳು, ಉತ್ಪನ್ನಗಳು ಮತ್ತು ಪ್ಲಾಟ್‍ಫಾರಂಗಳನ್ನು ಈ ಸಂಸ್ಥೆ ಪೂರೈಸುತ್ತಿದೆ.

ಭಾರತದ ಇಂಜಿನಿಯರಿಂಗ್ ಮತ್ತು ಸಾಫ್ಟ್‍ವೇರ್ ಪ್ರತಿಭೆಗಳನ್ನು ಬಳಸಿಕೊಳ್ಳುವ ಬದ್ಧತೆ ಜೊತೆಗೆ ಯುಎಸ್‍ಟಿ ಸಂಸ್ಥೆಯು ಬೆಂಗಳೂರು, ಹೈದ್ರಾಬಾದ್, ಅಹ್ಮದಾಬಾದ್, ಚೆನ್ನೈ, ತಿರುವನಂತಪುರಂ, ಕೊಚ್ಚಿ, ಪುಣೆ, ಕೊಯಿಮತ್ತೂರು, ಹೊಸೂರು ಮತ್ತು ದಿಲ್ಲಿ ಎನ್‍ಸಿಆರ್‍ಗಳಲ್ಲಿ ಸಮರ್ಪಿತ ಸಾಫ್ಟ್‍ವೇರ್ ವಿತರಣಾ ಕೇಂದ್ರಗಳನ್ನು ಹೊಂದಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ(ಐಟಿ), ಜೈವಿಕ ತಂತ್ರಜ್ಞಾನ(ಬಿಟಿ) ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ(ಎಸ್&ಟಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಐಎಎಸ್ ಅವರು ಮಾತನಾಡಿ, “ನಮ್ಮ ಆಳವಾದ ತಾಂತ್ರಿಕ ಪ್ರತಿಭೆ, ಚಟುವಟಿಕೆಯ ತಾಂತ್ರಿಕ ಪರಿಸರ ವ್ಯವಸ್ಥೆ, ಕಾಸ್ಮೋಪಾಲಿಟನ್ ಸಂಸ್ಕøತಿ ಮತ್ತು ಮುಂದಾಲೋಚನೆಯ ಸರ್ಕಾರಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ. ಕರ್ನಾಟಕದ ವಿಸ್ತಾರವಾದ ಮತ್ತು ವೈವಿಧ್ಯಪೂರ್ಣ ಸಂಪನ್ಮೂಲ ಆಧಾರವು ಗೌರವಾನ್ವಿತ ಹೂಡಿಕೆಯ ಗುರಿಯಾಗಿ ಜಗತ್ತಿನ ಎಲ್ಲೆಡೆಯ ಹೂಡಿಕೆದಾರರನ್ನು ಆಕರ್ಷಿಸಿದೆ. ವರ್ಷದಿಂದ ವರ್ಷಕ್ಕೆ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಿಸ್ತರಣೆ ಕೈಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ತನ್ನ ಬೆಂಗಳೂರು ಕಚೇರಿಯಲ್ಲಿ 6000ಕ್ಕೂ ಹೆಚ್ಚಿನ ಉದ್ಯೋಗಿಗಳ ಸಂಖ್ಯೆಯನ್ನು ದಾಟಿರುವುದಕ್ಕೆ ಯುಎಸ್‍ಟಿ ಸಂಸ್ಥೆಗೆ ನಾನು ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಯುಎಸ್‍ಟಿ ಸಂಸ್ಥೆ ಇನ್ನು ಹೆಚ್ಚಿನ ನೇಮಕಾತಿಗಳನ್ನು ಕೈಗೊಳ್ಳಲಿದೆ ಎಂಬುದು ಅದ್ಭುತ ವಿಷಯವಾಗಿದೆ. ಕರ್ನಾಟಕ ಸರ್ಕಾರದಲ್ಲಿ ನಾವು ಯುಎಸ್‍ಟಿಗೆ ಅದರ ಬೆಳವಣಿಗೆ ಮತ್ತು ವಿಸ್ತರಣೆ ಯೋಜನೆಗಳಲ್ಲಿ ಬೆಂಬಲಿಸುವುದನ್ನು ಎದುರುನೋಡುತ್ತೇವೆ. ಯುಎಸ್‍ಟಿ ಮತ್ತು ಅದರ ಉದ್ಯೋಗಿಗಳಿಗೆ ಹೃದಯಪೂರ್ವಕವಾಗಿ ಶುಭಾಶಯಗಳನ್ನು ನಾವು ಕೋರುತ್ತೇವೆ’’ ಎಂದರು.

ಮೈಲುಗಲ್ಲನ್ನು ಕುರಿತು ಯುಎಸ್‍ಟಿಯ ಭಾರತದ ರಾಷ್ಟ್ರೀಯ ಮುಖ್ಯಸ್ಥರು ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಲೆಕ್ಸಾಂಡರ್ ವರ್ಗೀಸ್ ಅವರು ಮಾತನಾಡಿ, “ಕಂಪನಿಯ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಕೇಂದ್ರಗಳಲ್ಲಿ ಒಂದರ ಮೂಲಕ ಬೆಂಗಳೂರಿನಲ್ಲಿ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ನಾವು ಬಹಳ ಉತ್ಸಾಹಿತರಾಗಿದ್ದೇವೆ. ಯುಎಸ್‍ಟಿನಲ್ಲಿ ನಾವು ಅಗ್ರ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಲು ದೃಢನಿಶ್ಚಯ ಹೊಂದಿದ್ದೇವೆ. ತನ್ನ ವರ್ಗದಲ್ಲಿ ಅತ್ಯುತ್ತಮವಾದ ಡಿಜಿಟಲ್ ಕ್ರಾಂತಿಯನ್ನು ವಿಸ್ತರಿಸಲು ಕಂಪನಿಗೆ ಅವಕಾಶವನ್ನು ಇವರು ಪೂರೈಸಲಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಅದ್ಭುತ ಐಟಿ ಉದ್ಯಮದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ನಮ್ಮ ಜಾಗತಿಕ ಗ್ರಾಹಕರಿಗೆ ಬೆಂಬಲ ನೀಡಲಿದ್ದಾರೆ’’ ಎಂದರು.

“ಯುಎಸ್‍ಟಿಯ ಬೆಂಗಳೂರು ಕೇಂದ್ರ ಜಾಗತಿಕವಾಗಿ ನಮ್ಮ 2ನೇ ಅತ್ಯಂತ ದೊಡ್ಡ ಅಭಿವೃದ್ಧಿ ಕೇಂದ್ರವಾಗಿದೆ. ನಮ್ಮ ವ್ಯವಹಾರ ವಿಸ್ತರಣೆಯಲ್ಲಿನ ಹಾಗೂ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳವನ್ನು ಪೂರೈಸುವುದಕ್ಕಾಗಿ ಬೆಂಗಳೂರಿನಲ್ಲಿ 6000ಕ್ಕೂ ಹೆಚ್ಚಿನ ನೂತನ ಉದ್ಯೋಗಾವಕಾಶಗಳನ್ನು ನಾವು ತೆರೆಯಲಿದ್ದೇವೆ. 1999ರಲ್ಲಿ ಸ್ಥಾಪನೆಯಾದಾಗಿನಿಂದ ತಂತ್ರಜ್ಞಾನದ ಮೂಲಕ ಜೀವನಗಳನ್ನು ಬದಲಿಸುವ ಅಭಿಯಾನ ಯುಎಸ್‍ಟಿನ ಲೋಪರಹಿತ ಪರಂಪರೆಯಾಗಿದೆ. ಗ್ರಾಹಕರೆಡೆಗೆ ನಾವು ಗಮನಕೇಂದ್ರೀಕರಿಸುವುದು, ನಮ್ಮ ಉದ್ಯೋಗಿಗಳ ಆರೈಕೆ ಮತ್ತು ಸಮಾಜಕ್ಕೆ ನಮ್ಮ ಬದ್ಧತೆಗಳಲ್ಲಿ ಇದು ಆಳವಾಗಿ ಪ್ರತಿಬಿಂಬಿತವಾಗಿದೆ. ಬೆಂಗಳೂರು ಮತ್ತು ಹಲವಾರು ಮೊದಲ ಮತ್ತು ಎರಡನೇ ಹಂತದ ಭಾರತದ ನಗರಗಳಲ್ಲಿ ನಮ್ಮ ಬೆಳವಣಿಗೆ ಇದಕ್ಕೆ ಸಾಕ್ಷಿಯಾಗಿದೆ. ಹೆಚ್ಚುವರಿಯಾಗಿ ನಮ್ಮ ಸಾಮಥ್ರ್ಯಗಳ ಮೂಲವಾಗಿರುವ ಡಿಜಿಟಲ್ ಜೊತೆಗೆ ನಾವು ಕೈಗಾರಿಕೆಯ ಮುಂಚೂಣಿಯ ಕಲಿಕಾ ಅವಕಾಶಗಳನ್ನು ಜೊತೆಗೆ ಉದ್ಯಮಶೀಲತೆಯ ಕಾರ್ಯ ಸಂಸ್ಕøತಿ ಮತ್ತು ಪ್ರಮುಖ ಗ್ರಾಹಕರ ಸಂಪರ್ಕವನ್ನು ನಮ್ಮ ಉದ್ಯೋಗಿಗಳಿಗೆ ನಾವು ಸಾದರಪಡಿಸುತ್ತೇವೆ’’ ಎಂದು ಬೆಂಗಳೂರು ಯುಎಸ್‍ಟಿ ಕೇಂದ್ರದ ಮುಖ್ಯಸ್ಥರು, ಜಿಸಿಸಿ ಭಾರತ ವಿಭಾಗದ ಪ್ರಧಾನ ಪ್ರಬಂಧಕರು ಮತ್ತು ಮುಖ್ಯಸ್ಥರು ಅಲ್ಲದೆ, ಯುಎಸ್‍ಟಿಯ ಉತ್ತರ ಈಶಾನ್ಯ ಏಷ್ಯಾ ವ್ಯವಹಾರ ಘಟಕದ ಮುಖ್ಯಸ್ಥರಾದ ಮನು ಸಿವರಾಜನ್ ಅವರು ಹೇಳಿದರು.

ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿಗಳ ಕಡೆಗೆ ಗಮನ ಕೇಂದ್ರೀಕರಿಸುವುದರೊಂದಿಗೆ ನಮ್ಮ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಯಾವಾಗಲೂ ಯುಎಸ್‍ಟಿ ಕೆಲಸ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಸಲ್ಲಿಸುತ್ತಿದೆ. ನಮ್ಮ ಗ್ರಾಹಕರಿಗೆ ಇಂಜಿನಿಯರಿಂಗ್ ಸೇವೆಗಳು ಸೇರಿದಂತೆ ಯುಎಸ್‍ಟಿನ ಡಿಜಿಟಲ್ ಮತ್ತು ನೂತನ ಪೀಳಿಗೆಯ ಸಾಮಥ್ರ್ಯಗಳ ಬೆಳವಣಿಗೆಯ ಸ್ತಂಭ ಬೆಂಗಳೂರು ಕೇಂದ್ರವಾಗಿದೆ ಎಂಬ ವಿಷಯ ನಮಗೆ ಹರ್ಷ ನೀಡುತ್ತದೆ. ಜೊತೆಗೆ ಇವು ನಮ್ಮ ಕೇಂದ್ರಕ್ಕೆ ಉತ್ತಮ ಸಂಖ್ಯೆಯ ಅಗ್ರ ಪ್ರತಿಭೆಗಳನ್ನು ಆಕರ್ಷಿಸಿದೆ. ಇಂದು ಭಾರತದಲ್ಲಿ ನಾವು ನಂಬರ್ ಒನ್ ಸೆಮಿಕಂಡೆಕ್ಟರ್ ಇಂಜಿನಿಯರ್ ಸೇವೆಗಳ ಕಂಪನಿ ಕೂಡ ಆಗಿದ್ದೇವೆ ಎನ್ನುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಜೊತೆಗೆ ನಾವು ಅಗ್ರ ಸೆಮಿಕಂಡೆಕ್ಟರ್ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ ಇದೇ ಸಾಮಥ್ರ್ಯಕ್ಕಾಗಿ ಬೆಂಗಳೂರು ಸೆಂಟರ್ ನಮ್ಮ ಕೇಂದ್ರವಾಗಿದೆ’’ ಎಂದು ಯುಎಸ್‍ಟಿ ಬೆಂಗಳೂರಿನ ಇಂಜಿನಿಯರಿಂಗ್ ಸೇವೆಗಳ ಹಿರಿಯ ನಿರ್ದೇಶಕರು ಮತ್ತು ಕೇಂದ್ರದ ಉಪ ಮುಖ್ಯಸ್ಥರು ಆದ ಕಿರಣ್‍ಕುಮಾರ್ ದೊರೆಸ್ವಾಮಿ ಅವರು ಹೇಳಿದರು.

ಯುಎಸ್‍ಟಿ ಹೈದ್ರಾಬಾದ್ ಇತ್ತೀಚೆಗೆ 1000 ಉದ್ಯೋಗಿಗಳ ಸೇರ್ಪಡೆಯ ಸಂಭ್ರಮಾಚರಣೆ ನಡೆಸಿತ್ತು. ಮುಂದಿನ ಎರಡು ವರ್ಷಗಳ ಒಳಗೆ 2000 ಉದ್ಯೋಗಿಗಳಿಗೆ ತನ್ನ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು ಹೊಂದಿದೆ. ಇದೇ ವರ್ಷ ಜಗತ್ತಿನ ಎಲ್ಲೆಡೆ 10,000 ನೂತನ ಉದ್ಯೋಗಿಗಳನ್ನು ನೇಮಕಾತಿ ಮಾಡುವ ತನ್ನ ಯೋಜನೆಗಳನ್ನು ಕೂಡ ಯುಎಸ್‍ಟಿ ಪ್ರಕಟಿಸಿದೆ.

ಡಿಜಿಟಲ್ ಪ್ರಾವೀಣ್ಯತೆಗಳು ಮತ್ತು ಡಿಜಿಟಲ್ ಪರಿವರ್ತನೆ, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಮೂಲಸೌಕರ್ಯ, ಜಾವ, ಡಾಟಾ ವಿಜ್ಞಾನ ಮತ್ತು ಇಂಜಿನಿಯರಿಂಗ್, ಅಪ್ಲಿಕೇಷನ್ ಡವಲಪ್‍ಮೆಂಟ್ ಮತ್ತು ಆಧುನೀಕರಣ, ಎಐ/ಎಂಎಲ್, ಆಟೋಮೇಷನ್(ಆರ್‍ಪಿಎ/ಐಪಿಎ) ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗಿ ನೇಮಕಾತಿ ನಡೆಯಲಿದೆ.

ಯುಎಸ್‍ಟಿ ಕುರಿತು : 20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಯುಎಸ್‍ಟಿ ಜಗತ್ತಿನ ಅತ್ಯುತ್ತಮ ಕಂಪನಿಗಳ ಜೊತೆಯಲ್ಲಿ ಕೆಲಸ ಮಾಡಿದ್ದು, ಪರಿವರ್ತನೆಯ ಮೂಲಕ ನಿಜವಾದ ಪರಿಣಾಮ ಉಂಟುಮಾಡಿದೆ. ತಂತ್ರಜ್ಞಾನದಿಂದ ಚಾಲಿತವಾಗಿ, ಜನರಿಂದ ಸ್ಫೂರ್ತಿ ಹೊಂದಿದ್ದು, ನಮ್ಮ ಉದ್ದೇಶದ ನೇತೃತ್ವ ಪಡೆದಿರುವ ಸಂಸ್ಥೆಯಲ್ಲಿ ನಾವು ವಿನ್ಯಾಸದಿಂದ ಕಾರ್ಯಾಚರಣೆಯವರೆಗೆ ನಮ್ಮ ಗ್ರಾಹಕರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತೇವೆ. ನಮ್ಮ ಚುರುಕುಗತಿಯ ಮಾರ್ಗದ ಮೂಲಕ ಅವರ ಮೂಲ ಸವಾಲುಗಳನ್ನು ನಾವು ಗುರುತಿಸುತ್ತೇವೆ. ಅವರ ದೃಷ್ಟಿಕೋನವನ್ನು ಜೀವಂತವಾಗಿಸುವ ಬದಲಾವಣೆ ತರುವಂತಹ ಪರಿಹಾರಗಳನ್ನು ರೂಪಿಸುತ್ತೇವೆ. ಈ ಕ್ಷೇತ್ರದಲ್ಲಿ ಆಳವಾದ ಪರಿಣತಿಯೊಂದಿಗೆ ಮತ್ತು ಭವಿಷ್ಯಕ್ಕೆ ತಕ್ಕ ತತ್ವದೊಂದಿಗೆ ನಮ್ಮ ಗ್ರಾಹಕ ಸಂಸ್ಥೆಗಳಿಗೆ ನವೀನತೆ ಮತ್ತು ಚುರುಕುತನವನ್ನು ಅಳವಡಿಸುತ್ತೇವೆ. ಇದರೊಂದಿಗೆ ಜಗತ್ತಿನ ಎಲ್ಲೆಡೆಯ ಹಲವಾರು ಉದ್ಯಮಗಳಲ್ಲಿ ಮೌಲ್ಯ ಮತ್ತು ದೀರ್ಘಕಾಲ ಉಳಿಯುವ ಬದಲಾವಣೆಗಳನ್ನು ತರುತ್ತೇವೆ. 25 ದೇಶಗಳಲ್ಲಿನ ನಮ್ಮ 26,000ಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳೊಂದಿಗೆ ಮಿತಿರಹಿತ ಪರಿಣಾಮ ಉಂಟುಮಾಡಲು ನಾವು ನಿರ್ಮಾಣ ಕೈಗೊಳ್ಳುತ್ತೇವೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ಜೀವನಗಳನ್ನು ಸ್ಪರ್ಶಿಸುತ್ತೇವೆ. ust.com  ರಲ್ಲಿ ನಮ್ಮನ್ನು ಸಂದರ್ಶಿಸಿ.

ಇತ್ತೀಚಿನ ಸುದ್ದಿ

ಜಾಹೀರಾತು