5:40 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನಿಂದ ದೈವ ನರ್ತಕರಿಗೆ, ಸಹಾಯಕರಿಗೆ ಹಾಗೂ ಸೇವಕರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

30/05/2021, 14:26

ಉಡುಪಿ(reporterkarnataka news): ಕೊರೊನಾ ಮಹಾಮಾರಿ ಶ್ರೀಮಂತ – ಬಡವರೆನ್ನದೆ ಎಲ್ಲರಿಗೂ ಕಾಡಿದೆ. ದುಡಿದು ತಿನ್ನುವ ಕೈಗಳಿಗೆ , ಬಡ ಜನರಿಗೆ ಕೊರೊನಾ ಭಾರೀ ಕಷ್ಟ ನೀಡಿದೆ. ಇದು ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆಯವರನ್ನೂ ಬಿಟ್ಟಿಲ್ಲ. ತುಳುನಾಡಿನಲ್ಲಿ ಸದ್ಯ ಕೊರೊನಾ ಹಿನ್ನಲೆಯಲ್ಲಿ ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ತಲಾ 10 ಕೆಜಿ ಅಕ್ಕಿ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.

ಕೊರೊನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿದೆ. ಹಾಗಾಗಿ ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಆಶಿಸಿ ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಅವರು ಆಹಾರ ಕಿಟ್ ಗಳನ್ನು ವಿತರಿಸಿದರು‌.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು , ಪುನೀತ್ ಕುಲಾಲ್ ಮಜೂರು , ವಿಕಾಸ್ ದೇವಾಡಿಗ ಮಜೂರು , ಶಿವು ಮಜೂರು ,ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು