ಇತ್ತೀಚಿನ ಸುದ್ದಿ
ಚಳ್ಳಕೆರೆ: 15 ದಿನಗಳಲ್ಲಿ 100ಕ್ಕೂ ಹೆಚ್ಚು ಮನೆ ಕುಸಿತ; 5 ಮಂದಿ ಸಾವು; ಹಳೆ ಗೋಡೆಗಳ ಸರ್ವೇ ಆರಂಭ
21/11/2021, 10:49
ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಕಳೆದ ಸುಮಾರು 15 ದಿನದಿಂದ ಸತತ ಮಳೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಗೋಡೆ ಕುಸಿದು ಐದು ಜನರು ಪ್ರಾಣ ಕಳೆದುಕೊಂಡಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲವಾದ ಮನೆಗಳ ಸರ್ವೇ ಕಾರ್ಯವನ್ನು ಜಿಟಿ ಜಿಟಿ ಮಳೆಯಲ್ಲೂ ಕೊಡೆ ಹಿಡಿದು ಆರಂಭಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ, ರಾಮಜೋಗಿಹಳ್ಳಿ, ಚಿಕ್ಕಮ್ಮನಹಳ್ಳಿ, ದೊಡ್ಡೇರಿ ಕೆರೆ ಮುದ್ದಿನ ಹಟ್ಟಿ, ಕೋಡಿಹಳ್ಳಿ, ಹಿರೇಹಳ್ಳಿ , ಪಾಲನಾಯಕನ ಕೋಟೆ, ಕಕ್ಕಿ ಬೋರನ ಹಟ್ಟಿ ಹಳ್ಳಿಗಳು ಸೇರಿದಂತೆ ವಿವಿಧ ಗ್ರಾಮಗಳಿಗೆ ತಹಶೀಲ್ದಾರ್ ಎನ್.ರಘುಮೂರ್ತಿ,ತಾಪಂ ಇಒ ಮಡಗಿನ ಬಸಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ಆರಂಭಿಸಿದ್ದಾರೆ.
ಗೋಡೆ ಕುಸಿದು ಐದು ಜನರು ಮೃತ ಪಟ್ಟ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಹಳೆಯ ಶಿಥಿಲವಾದ ಗೋಡೆ ಬಿರುಕು ಬಿಟ್ಟಿರುವ ಮನೆಗಳ ಸರ್ವೆ ಮಾಡಿ ಅಂತಹ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶಾಲೆ ಹಾಗೂ ಸಮುದಾಯಭವನಗಳಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಾಪಂ ಇಒ ಮಡಗಿನ ಬಸಪ್ಪ ತಿಳಿಸಿದ್ದಾರೆ.
ಗ್ರಾಪಂ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಜಿಟಿ ಜಿಟಿ ಯಲ್ಲೂ ಬೆಳ್ಳೆಂ ಬೆಳ್ಳಗ್ಗೆ ಕೊಡೆಗಳನ್ನಿಡಿದು ಸರ್ವೆ ಕಾರ್ಯಕ್ಕೆ ಚುರುಕುಮಟ್ಟಿಸಿದ್ದಾರೆ.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನಲ್ಲಿ ಅಕಾಲಿಕ ಮೆಳೆ ಪ್ರಾರಂಭವಾಗಿ 15 ದಿನಗಳನ್ನು ಸುಮಾರು 100 ಕ್ಕೂಹೆಚ್ಚು ಮನೆಗಳು ಕುಸಿದಿದ್ದು ಪ್ರತಿ ಗ್ರಾಮಗಳಲ್ಲಿ ಹಳೆಯ ಶಿಥಿಲವಾದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಸುಮುದಾಯ ಭವನ, ಶಾಲೆಗಳಲ್ಲಿ ವಾಸ ಮಾಡುವಂತೆ ತಿಳಿಸಿದ್ದು ಸರಕಾರದಿಂದ ವಸತಿಯೋಜನೆಯಡಿಯಲ್ಲಿ ಬಿದ್ದ ಹಾಗೂ ಶಿಥಿಲವಾದ ಮನೆಗಳಿಗೆ ವಸತಿ ಯೋಜನೆಯ ಮನೆಗಳ ಮಂಜೂರಾತಿ ಮಾಡುವಂತೆ ತಿಳಿಸಿದ್ದಾರೆ