3:20 AM Thursday28 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಟೋರ್ಪೆಡೋಸ್ ಬ್ಯಾಡ್ಮಿಂಟನ್ ಮಹಾಸಂಗ್ರಾಮ: ಕುಂದಾಪುರ ಫೂಟ್ ವರ್ಕರ್ಸ್ ಪ್ರಥಮ, ಟೋರ್ಪೆಡೋಸ್ ಟೈಟನ್ಸ್ ದ್ವಿತೀಯ

15/11/2021, 20:11

ಮಂಗಳೂರು:(reporterkarnatakanews): ಕ್ರೀಡಾಕ್ಷೇತ್ರದಲ್ಲಿ ಹೊಸತನದೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನವೆಂಬರ್ 13 ಹಾಗೂ 14 ರಂದು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ಗಳನ್ನೊಳಗೊಂಡ ಟೋರ್ಪೆಡೋಸ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ಆಯೋಜಿಸಿತ್ತು.

ಸ್ಪರ್ಧೆಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿ ಸ್ಥಳೀಯ ಪ್ರಮುಖರು ತಂಡದ ಮಾಲಕತ್ವವನ್ನು ವಹಿಸಿಕೊಂಡಿದ್ದರು.ಪ್ರತಿ ತಂಡದಲ್ಲಿ 18 ಜನ ಆಟಗಾರರಿದ್ದು ಅದರಲ್ಲಿ ನಾಲ್ಕು ಮಹಿಳಾ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು.ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಈ ಕ್ರೀಡಾ ಸಂಗ್ರಾಮ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಈ ಬ್ಯಾಡ್ಮಿಂಟನ್ ಸ್ಪರ್ಧೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದಿದ್ದು 11 ರಿಂದ 19 ವರ್ಷ ವಯೋಮಿತಿಯ ಬಾಲಕರು, 19ರಿಂದ 30 ವರ್ಷದವರ ಪುರುಷರು, 30ರಿಂದ 40 ವರ್ಷ ವಯೋಮಿತಿಯ ಪುರುಷರು ,ನಲವತ್ತರಿಂದ ಐವತ್ತು ವರ್ಷ ವಯೋಮಿತಿಯ ಪುರುಷರು ,50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಒಟ್ಟು ನಾಲ್ಕು ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಿತ್ತು.13ರಂದು 12 ತಂಡಗಳಲ್ಲಿ 108 ಲೀಗ್ ಪಂದ್ಯಾಟವನ್ನು ನಡೆಸಿ 4 ತಂಡಗಳು ಅಂಕಪಟ್ಟಿಯಿಂದ ಹೊರಗುಳಿಯಿತು.ನವೆಂಬರ್ 14 ರಂದು ಕ್ವಾರ್ಟರ್ ಫೈನಲ್ ಹಣಾಹಣಿಯು 8 ತಂಡಗಳ ನಡುವೆ ನಡೆದು 4 ತಂಡಗಳು ಸೆಮಿ ಫೈನಲ್ ಹಂತವನ್ನು ಪ್ರವೇಶಿಸಿತು.

ಅತ್ಯುತ್ತಮ ಆಟಗಾರರಾಗಿ ವಿನ್ನರ್ಸ್ ಪಟ್ಟ ಹಾಗೂ ಎರಡು ಲಕ್ಷ ನಗದು ಬಹುಮಾನವನ್ನು ಮುಡಿಗೇರಿಸಿಕೊಂಡ ಡಾ. ಸಂದೀಪ್. ಜಿ ಮಾಲಕತ್ವದ ಕುಂದಾಪುರ ಫೂಟ್ ವರ್ಕರ್ಸ್ ತಂಡದ ಆಟಗಾರರಾದ ಗಿರೀಶ್ ಪಿಂಟೋ,ಗಗನ್ ಗೌಡ, ಯಶಸ್ ಗೌಡ, ಸಾಗರ್ ಜೈನ್, ಮನೋಜ್ ಶೆಟ್ಟಿ, ಅಜಯ್ ಶೆಟ್ಟಿ, ರಾಯ್ ಪಿ.ಜೆ, ಶಮೀರ್, ರಾಜೇಶ್ ನಾಯರ್, ಪ್ರಕಾಶ್ ರಾವ್, ನೂರ್ ಹುಸೈನ್, ಕ್ಷಿತಿ ದೀಪಕ್ ,ಆಶ್ರಯ್.ಜಿ,ಮೇಘನಾ ಅಮೀನ್,ಸ್ಪಂದನ.ವಿ,ಪ್ರಿಯಾ ನಾಯಕ್,ಅನೀಶ್. ಎಚ್ ದೇವಾಡಿಗ ಮಿಂಚಿದ್ದರು.

ರನ್ನರ್ಸ್ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡ ಗೌತಮ್ ಶೆಟ್ಟಿ ಮಾಲಕತ್ವದ ಟೋರ್ಪೆಡೋಸ್ ಟೈಟನ್ಸ್ ತಂಡದಲ್ಲಿ ಶಮಂತ್ ರಾವ್,ಅನಿರುಧ್ ಭಟ್,ಮಹೇಶ್ ಎಂ, ಆದರ್ಶ್ ಸಂಜೀವ್. ಪಿ,ಧಿರೇಶ್,ಪುನೀತ್,ರೇಣುಕಾ ಪ್ರಸಾದ್,ಅನಂತ್ ರಾಮದಾಸ್ ಪೈ,ಅರುಣ್,ಅಶೋಕ್ ಕುಮಾರ್,ರವಿ ಕುಮಾರ್,ಜೀವನ್,ಶ್ರೇಯಸ್.ವಿ, ಪ್ರಚಿತಾ.ಪಿ,ಆತ್ರೀಯಾ.ಎಸ್.ಪ್ರಭು,ರಶ್ಮಿ ಶೆಟ್,ನಾಗಮಣಿ.ಎಂ.ಜಿ ಸೆಣಸಾಡಿದ್ದರು.

ಫೈನಲ್ ಸುತ್ತಿಗೆ ಪ್ರವೇಶಿಸಲಾಗದಿದ್ದರೂ ತಮ್ಮ ಅತ್ಯುತ್ತಮ ಕ್ರೀಡಾ ಪ್ರದರ್ಶನವನ್ನಿತ್ತು ದೇವೇಂದ್ರ ಶೆಟ್ಟಿ ನಾಯಕತ್ವದ ಮಂಗಳೂರು ಸ್ಟೋಕರ್ಸ್ ತಂಡದ ಆಟಗಾರರಾದ ಸಚಿನ್ ಜೈಸನ್,ಆರುಷ್ ಪತ್ರಾವೋ,ವರುಣ್ ಗೌಡ,ವಿಶಾಲ್ ನಾಯ್ಕ್,ರಿಯಾಝ್ ಅಹ್ಮದ್,ಅಶ್ರಫ್,ತಸ್ಲೀಮ್,ರವೀಶ್ ಕುಮಾರ್,ದಿನೇಶ್ ಆಚಾರ್ಯ,ಪ್ರವೀಣ್ ಕುಮಾರ್.ಎಂ,ರಫೀಕ್, ಸಹರ್ಷ್.ಎಸ್ ಪ್ರಭು,ಮಹನ್,ನಿಧಿಶ್ರೀ,ಧನಲಕ್ಷ್ಮೀ,ಕವಿತಾ ಕಂಬರ್,ವಿಜೇತ.ಕೆ ಹಾಗೂ ಗಣೇಶ್ ಕಾಮತ್ ನಾಯಕತ್ವದ ಸ್ಪೋರ್ಟ್ಸ್ ಡೆನ್ ಸ್ಮ್ಯಶರ್ಸ್ ತಂಡದ ಆಟಗಾರರಾದ ಅಬಿ ಅಮುದಾನ್,ನೌಶಾದ್ ಅಬ್ದುಲ್ಲ, ಸಾಯಿ ಕುಮಾರ್,ಒಮರ್,ರಯೀಝ್,ರೋಹಿತ್ ಎಂ.ಕೆ,ಮಹೇಶ್ ಪ್ರಭು,ಪ್ರದೀಪ್ ಭಟ್,ಕುಮಾರ್ ದೇವಾಡಿಗ, ಅಯುಬ್ ಸಿ.ಕೆ,ಹರೀಶ್.ಬಿ.ಎ,ತುಷಾರ್, ತನ್ಮಯ್ ಪ್ರಭು,ಅಂಜಲಿ ದಿಲಿಷ್, ಕಶ್ವಿ,ಅದಿತಿ, ಚಂಚಲಾಕ್ಷಿ ಸೆಮಿ ಫೈನಲ್ ಹಂತದವರೆಗೂ ತಲುಪಿ ತಮ್ಮ ಆತ್ಯದ್ಭುತ ಆಟದಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಸವ್ಯಸಾಚಿ ತಂಡದ ಮಾಲಕರಾದ ವಿಜಯ್ ಹೆಗ್ಡೆ,ರೂಪೇಶ್ ಶೆಟ್ಟಿ,ಝರಾ ರಾಯಲ್ಸ್ ತಂಡದ ಹಾಗೂ ಅಲುಮಝೈನ್ ಗ್ರೂಪ್ಸ್ ನ ಮುಖ್ಯಸ್ಥರಾದ ಜಹೀರ್ ಝಕ್ರೀಯಾ, ಝರಾ ಕನ್ವೆನ್ಷನ್ ಸೆಂಟರ್ ನ ಮುಖ್ಯಸ್ಥರಾದ ಅಬೂಬಕ್ಕರ್,ಜಿ.ಡಿ ಗ್ರೂಪ್ಸ್ ನ ರೋಷನ್,ಸದಾನಂದ ನಾವಡ,ಈ ಪಂದ್ಯಾವಳಿಯ ಸಂಯೋಜಕರಾದ ಗಣೇಶ್. ವಿ ಕಾಮತ್,ತಾಂತ್ರಿಕ ಮುಖ್ಯಸ್ಥರಾದ ರಿಯಾಝ್ ಅಹಮ್ಮದ್,ಕುಳಾಯಿ ಫೌಂಡೇಶನ್ ನ ಮುಖ್ಯಸ್ಥರಾದ ಪ್ರತಿಭಾ ಕುಳಾಯಿ,ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಉಪಸ್ಥಿತಿ ವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು