8:48 AM Thursday31 - October 2024
ಬ್ರೇಕಿಂಗ್ ನ್ಯೂಸ್
ಪಿಎಲ್ಐ ಯೋಜನೆಯಡಿ ಮೆರಿಲ್ ಸುಧಾರಿತ ಉತ್ಪಾದನಾ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು…

ಇತ್ತೀಚಿನ ಸುದ್ದಿ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಗೋಪೂಜೆ

15/11/2021, 11:08

ಮಂಗಳೂರು(reporterkarnataka.com): ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ಭಾನುವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ, ಗೋಪೂಜೆ,ಹಾಗೂ ಸತ್ಯನಾರಾಯಣ ಮಹಾಪೂಜೆ ಕಾರ್ಯಕ್ರಮ ನಡೆಸಿತು.

ಬೆಳಿಗ್ಗೆ ದೇವಸ್ಥಾನದ ತಂತ್ರಿಗಳಾಗಿರುವ ಶ್ರೀಹರಿ ಉಪಾಧ್ಯಾಯರ  ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನಾರ್ದನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್ ದಂಪತಿ ಗೋ ಪೂಜೆ ನೆರವೇರಿಸಿದರು.

ಜಿಲ್ಲಾ ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎ. ಸಾಲ್ಯಾನ್ ಮತ್ತು ಪದಾಧಿಕಾರಿಗಳು ಸದಸ್ಯರು ಹಾಗೂ ವೀರನಾರಾಯಣ ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ್ ಮತ್ತು ಪದಾಧಿಕಾರಿಗಳು ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ ನೆರವೇರಿತು. ಪೂಜೆ ನಡೆದ ಬಳಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಮಯೂರ್ ಉಳ್ಳಾಲ್ ಮಾತನಾಡಿ, ಶ್ರೀ ವೀರನಾರಾಯಣ ಕ್ಷೇತ್ರ ಸಮಸ್ತ ಹಿಂದೂ ಬಾಂಧವರ ಕ್ಷೇತ್ರವಾಗಿದೆ. ಆದರೆ ಇತಿಹಾಸದಿಂದಲೇ ಕ್ಷೇತ್ರವನ್ನು ಕುಲಾಲ ಸಮಾಜ ಬಂಧುಗಳು ಆಡಳಿತವನ್ನು ನಡೆಸುತ್ತ ಬಂದಿದ್ದಾರೆ ಮುಂದೆಯೂ ನಡೆಸುತ್ತೇವೆ.  ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆಂದು ಸಂಕಲ್ಪ ಮಾಡಿದ್ದೇವೆ. ಮುಂದಿನ ತಿಂಗಳು ಜೀರ್ಣೋದ್ಧಾರದ ದೊಡ್ಡ ಮಟ್ಟಿನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಅದಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುಲಾಲ ಸಮಾಜ ಬಾಂಧವರು ಸೇರುವವರು ಇದ್ದಾರೆ.  ಕ್ಷೇತ್ರದಲ್ಲಿ ಕೆಲವೇ ದಿನಗಳ ಹಿಂದೆ ಭಜನೆ ಸತ್ಯನಾರಾಯಣ ಪೂಜೆ ಗೋಪೂಜೆ ಮಾಡಬೇಕೆಂದು ನಿರ್ಧಾರ ಮಾಡಿದ್ದೆವು. ಅದಕ್ಕೆ ಸಾವಿರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೇರಿಕೊಂಡಿರುವುದು ಅಭಿಮಾನ ತಂದಿದೆ. ದೇಶ ವಿದೇಶಗಳಿಂದ ಸಮಾಜಬಾಂಧವರು ಕ್ಷೇತ್ರದ ಮೇಲೆ ಭಕ್ತಿಯಿಂದ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆ. ಶ್ರೀ ವೀರನಾರಾಯಣ ಕ್ಷೇತ್ರ ಕುಲಾಲರ ಅಸ್ಮಿತೆ ಎಂದು ನುಡಿದರು.


ವೇದಿಕೆಯಲ್ಲಿ ದೇವಾಲಯದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ್ ಕುಲಾಲ್,  ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಎ. ದಾಮೋದರ, ವೀರನಾರಾಯಣ ಸೇವಾ ಟ್ರಸ್ಟ್ ಕಾರ್ಯಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್,  ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್,  ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್ , ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್ ಹಾಗೂ ದಯಾನಂದ ಅಡ್ಯಾರ್ , ಎಂ.ಪಿ. ಬಂಗೇರ, ರಾಮಣ್ಣ ಉಪ್ಪಿನಂಗಡಿ,
ಪುಂಡರೀಕಾಕ್ಷ, ಭಾಸ್ಕರ್ ಪೆರುವಾಯಿ, ಸುರೇಶ್ ಕುಲಾಲ್ ಬಂಟ್ವಾಳ, ಸುರೇಶ್ ಕುಲಾಲ್ ಮಳಲಿ, ಬಿಜೆಪಿಯ ಹಿರಿಯ ನಾಯಕಿ ರೂಪಾ ಡಿ ಬಂಗೇರ,  ನಾಗೇಶ್ ಕುಲಾಲ್ ಕುಲಾಯಿ, ಕಿರಣ್ಅಟ್ಲೂರು,ಉದ್ಯಮಿ ಅನಿಲ್ ದಾಸ್  ಸುರೇಶ್ ಕುಲಾಲ್ ಮಂಗಳಾದೇವಿ ಮತ್ತಿತರರು ಉಪಸ್ಥಿತರಿದ್ದರು.

ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಬಸ್ತಿ ವಂದಿಸಿದರು.

ಇದೇ ಸಂದರ್ಭ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದಿಂದ ಮಣ್ಣಿನಿಂದ ತಯಾರಿಸಲಾದ ಮಣ್ಣಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು