ಇತ್ತೀಚಿನ ಸುದ್ದಿ
ಮಂಗಳೂರು: ಮೂಲಗೇಣಿ ವೊಕ್ಕಲು ರಕ್ಷಣಾ ವೇದಿಕೆ 11ನೇ ಮಹಾಸಭೆ
15/11/2021, 10:53
ಮಂಗಳೂರು(reporterkarnataka.com): ಮೂಲಗೇಣಿ ವೊಕ್ಕಲು ರಕ್ಷಣಾ ವೇದಿಕೆ(ರಿ) ಮಂಗಳೂರು ಮತ್ತು ಉಡುಪಿ ಇದರ 11ನೇ ಮಹಾಸಭೆ ನಗರದ ಬಲ್ಮಠದ ಶಾಂತಿನಿಲಯ ಸಭಾಭವನದಲ್ಲಿ ಭಾನುವಾರ ನಡೆಯಿತು. ವೇದಿಕೆಯ ಸಲಹೆಗಾರರು ಹಾಗೂ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್,ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.



ನಝೀರ್ ಉಳ್ಳಾಲ್ ಮತ್ತು ಮನೋಹರ್ ಅವರ ಅತಿಥಿಗಳಾಗಿ ಹಾಜರಿದ್ದರು.ವೇದಿಕೆ ಅಧ್ಯಕ್ಷ ಮೆಕ್ಸಿಮ್ ಡಿಸಿಲ್ವ ಹಾಗೂ ಉಪಾಧ್ಯಕ್ಷ ಯಶೋಧರ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಪ್ರಾರಂಭದಲ್ಲಿ ಅಧ್ಯಕ್ಷ ಮೆಕ್ಸಿಮ್ ಅವರು ನೆರೆದ ಎಲ್ಲಾ ಮೂಲಗೇಣಿ ಬಾಧಿತರನ್ನು ಮತ್ತು ಸದಸ್ಯರನ್ನು ಸ್ವಾಗತಿಸಿದರು. ಎಸ್.ಎಸ್.ಶೇಟ್, ಉಡುಪಿ ಪ್ರತಿನಿಧಿ ಇವರು ಸಂಘದ ವರದಿ ಮತ್ತು ಲೆಕ್ಕ ಪತ್ರ ಸಭೆಯ ಮುಂದೆ ಇಟ್ಟರು.
ಲೆಸ್ಲಿ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.ಜೆರಾರ್ಡ್ ಟವರ್ಸ್ ವಂದಿಸಿದರು.














