6:40 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕೋಲಾರ: ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಶ್ ಸಾಕಾಣಿಕೆ ವಿರುದ್ಧ ರೈತ ಸಂಘ ಪ್ರತಿಭಟನೆ

12/11/2021, 07:41

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಜಿಲ್ಲಾದ್ಯಂತ ಕೆಲವು ಕೆರೆಗಳಲ್ಲಿ ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಶ್ ( ಮಾರ್ವೆ ರಾಕ್ಷಿಸಿ ಮೀನು ) ಸಾಕಾಣಿಕೆ ಮಾಡುತ್ತಿರುವ ಟೆಂಡರ್‌ದಾರರು ಪರವಾನಿಗೆಯನ್ನು ರದ್ದುಮಾಡಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಕೆರೆ ಟೆಂಡರ್‌ನಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘ ಆಗ್ರಹಿಸಿದೆ.

ರೈತ ಸಂಘದಿಂದ ಮೀನುಗಾರಿಕೆ ಇಲಾಖೆ ಮುಂದೆ ಮಾರ್ವ ಮೀನು ಸಮೇತ ಹೋರಾಟ ಮಾಡಿ ಉಪನಿರ್ದೇಶಕರು ಅನಂತ್ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಹೋರಾಟ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಜಿಲ್ಲಾದ್ಯಂತ ಮುಂಗಾರು ಮಳೆ ಆರ್ಭಟಕ್ಕೆ ಬಹುತೇಕ ಕೆರೆಗಳು ತುಂಬಿ , ಕೊಡಿ ಹರಿಯುತ್ತಿದ್ದು , ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ಕರೆದು ಸಾಕಾಣಿಕೆ ಮಾಡುತ್ತಿರುವುದಕ್ಕೆ ನಮ್ಮ ಅಭ್ಯಂತರವು ಇಲ್ಲ . ಆದರೆ ಸುಪ್ರಿಂ ಕೋರ್ಟ್ ನಿಷೇಧಿತ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಾರ್ವೆ ಮೀನನ್ನು ಕೆಲವರು ಕಾನೂನುಬಾಹಿರವಾಗಿ ಕೆರೆಗಳಲ್ಲಿ ಸಾಕಾಣಿಕೆ ಮಾಡುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳ ವಿರುದ್ಧ ಜನ ಸಾಮಾನ್ಯರು ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ . ಪರಿಸರ ಸಂರಕ್ಷಣೆ ಕಾಯ್ದೆ 1986 ರ ಸಕ್ಷೆನ್ ( 5 ) ಅನ್ವಯ ಮಾರ್ವೆ ಸಾಕಾಣಿಕೆ ಮತ್ತು ಮಾರಾಟ ಮಾಡಿದರೆ 5 ವರ್ಷ ಸಜೆ , ಒಂದು ವರ್ಷ ಜುಲ್ಮಾನೆ ವಿಧಿಸುವ ಕಾನುನು ಇದೆ . ಆದರೂ ಸಹ ಕಾನೂನುಬಾಹಿರವಾಗಿ ಕೆರೆಗಳಲ್ಲಿ ಸಾಕಾಣಿಕೆ ಮಾಡಿ ಬಡವರಿಗೆ ಉಚಿತವಾಗಿ ಈ ಮೀನು ತಿಂದರೆ ಕ್ಯಾನ್ಸರ್ , ಕ್ಷಯ , ಮಲೇರಿಯ ಮುಂತಾದ ಕಾಯಿಲೆಗಳು ಬರುವ ಲಕ್ಷಣಗಳನ್ನು ವೈದ್ಯರು ನೀಡಿದರೂ ಇವುಗಳನ್ನು ಸಾಕಾಣಿಕೆ ಮಾಡಲು ಮೀನುಗಾರಿಕೆ ಅಧಿಕಾರಿಗಳೇ ಕುಮ್ಮಕ್ಕು ನೀಡಿರುವುದು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು .

ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಸತತವಾಗಿ 20 ವರ್ಷಗಳಿಂದ ಮಳೆ ಇಲ್ಲದೆ , ಕೆರೆಗಳಲ್ಲಿ ನೀರಿಲ್ಲದೆ , ಅಲ್ಪಸ್ವಲ್ಪ ಮಳೆಯಿಂದ ಕೆರೆಗಳಲ್ಲಿ ಶೇಖರಣೆಯಾಗುತ್ತಿದ್ದ , ಕೆರೆ ನೀರಿಗೆ ಮೀನುಗಾರಿಕೆ ಇಲಾಖೆಯಿಂದ 5 ವರ್ಷಗಳು ಟೆಂಡರ್ ಕರೆದು ಮೀನು ಸಾಕಾಣಿಕೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು . ಆದರೆ ಕೆರೆಗಳು ಭರ್ತಿಯಾದ ಹಿನ್ನಲೆಯಲ್ಲಿ ಪಾರದರ್ಶಕವಾದ ಟೆಂಡರ್‌ ಕರೆಯದೇ ಇಲಾಖೆಯಲ್ಲಿ ಟೆಂಡರ್‌ ನೆಪದಲ್ಲಿ ಅವ್ಯವಹಾರ ನಡೆಸಿರುವ ಜೊತೆಗೆ ಇಲಾಖೆಗೆ ಸರ್ಕಾರದಿಂದ ಬರುವ ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮದ ದಾಖಲೆಗಳನ್ನು ಸೃಷ್ಟಿ ಮಾಡಿ ಭ್ರಷ್ಟಾಚಾರ ವೆಸಗುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು . ಒಂದುವಾರದೊಳದಗೆ ಬೇತಮಂಗಲ ಮೀನು ಸಾಕಾಣಿಕೆ ಕೇಂದ್ರದಲ್ಲಿ ನಡೆದಿರುವ ಅಕ್ರಮವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕು . ಹಾಗೂ ಆಫ್ರಿಕನ್ ಮಾರ್ವೆ ಮೀನನ್ನು ಸಾಕಾಣಿಕೆ ಮಾಡುತ್ತಿರುವುದನ್ನು ಟೆಂಡರ್ ದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪರವಾನಿಗೆಯನ್ನು ರದ್ದು ಮಾಡಬೇಕು . ಇಲ್ಲವಾದರೆ ಮೀನುಗಳ ಸಮೇತ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯನ್ನು ಮನವಿ ನೀಡಿದರು . ಮನವಿ ನೀಡಿ ಸ್ವೀಕರಿಸಿ ಮಾತನಾಡಿದ ಮೀನುಗಾರಿಕೆ ಉಪನಿರ್ದೇಶಕರು ಕೆಲವು ಕೆರೆಗಳಲ್ಲಿ , ಆಫ್ರಿಕನ್ ಮೀನು ಸಾಕಾಣಿಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ . ಟೆಂಡರ್‌ದಾರರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳುವ ಜೊತೆಗೆ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಕೆರೆ ಟೆಂಡರ್ ಅವ್ಯಹಾರದ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ನೀಡಿದರು . ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎನಳಿನಿಗೌಡ , ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ , ಕೋಲಾರ ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ , ಮೂರಾಂಡಹಳ್ಳಿ ಶಿವಾರೆಡ್ಡಿ , ಮಂಗನಂದ ತಿಮ್ಮಣ್ಣ , ಮಂಗಸಂದ್ರ ನಾಗೇಶ್ , ಅಶ್ವಥಪ್ಪ ,ಮಾಲೂರು ತಾ.ಅಧ್ಯಕ್ಷ ಪೆಮದೊಡ್ಡಿ ಯಲ್ಲಪ್ಪ , ಹರೀಶ್ , ಚಂದ್ರಪ್ಪ ,ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್ , ಪಿ.ಮುನಿಯಪ್ಪ , ವೆಂಕಟೇಶಪ್ಪ , ತೆರಹಳ್ಳಿ ಆಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು