ಇತ್ತೀಚಿನ ಸುದ್ದಿ
ತುಳು ಉಪನ್ಯಾಸ ಮಾಲಿಕೆಗೆ ಒಂದು ವರ್ಷ: ವರ್ಚುವಲ್ ವೇದಿಕೆಯಲ್ಲಿ ಇಂದು 52ನೇ ವಿಶೇಷ ಸಂಚಿಕೆ
29/05/2021, 07:44
ಮಂಗಳೂರು(reporterkarnataka news):
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ಪ್ರತಿ ಶನಿವಾರ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆ ಒಂದು ವರ್ಷ ಪೂರೈಸುತ್ತಿದೆ.
ನಿರಂತರ 51ವಾರಗಳ ಕಾಲ ನಡೆದು ಬಂದಿದ್ದ ಕಾರ್ಯಕ್ರಮದ 52ನೇವಿಶೇಷ ಸಂಚಿಕೆ ಮೇ 29 (ಶನಿವಾರ) ಸಂಜೆ 5 ಗಂಟೆಗೆವರ್ಚುವಲ್‌ವೇದಿಕೆಯಲ್ಲಿ ನಡೆಯಲಿದೆ.