10:29 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಕೊರೊನಾ ವಾರಿಯರ್ಸ್ ನರ್ಸ್ ಗಳು ಡ್ಯೂಟಿ ಮುಗಿಸಿ ಮನೆ ಹೇಗೆ ತಲುಪುತ್ತಾರೇ ಗೊತ್ತೇ?: ಜಿಲ್ಲಾಧಿಕಾರಿಯವರೇ ಕೇಳಿ! 

28/05/2021, 21:01

PTI
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಸರಕಾರವೇನೋ ನರ್ಸ್, ಆಶಾ ಕಾರ್ಯಕರ್ತರಿಗೆ ಕೊರೊನಾ ವಾರಿಯರ್ಸ್ ಅಂತ ಬಿರುದು ಕೊಟ್ಟಿದೆ. ಆದರೆ ಕೊಟ್ಟ ಬಿರುದಿಗೆ ತಕ್ಕ ಘನತೆಯಲ್ಲಿ ಅವರನ್ನು ನೋಡಿಕೊಳ್ಳಬೇಕಲ್ಲ? ಹಾಗೆ ಮಾಡದಿದ್ದರೆ ಬಿರುದಿಗೆಲ್ಲಿ ಬೆಲೆ?  ಇದಕ್ಕೆ ತಾಜಾ ನಿದರ್ಶನ ಜೀವದ ಹಂಗು ತೊರೆದು ದುಡಿಯುತ್ತಿರುವ ನಮ್ಮ ನಿಮ್ಮೆಲ್ಲರ ಅಕ್ಕ ತಂಗಿಯಂತಿರುವ ನರ್ಸ್ ಗಳು ಹಾಗೂ ಆಶಾ ಕಾರ್ಯಕರ್ತೆಯರು. ಇವರ ಗೋಳನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಮುಲ್ಕಿ, ಕಿನ್ನಿಗೋಳಿ, ಬಜಪೆ ಸೇರಿದಂತೆ ಗ್ರಾಮೀಣ ಪ್ರದೇಶದ ಸಾಕಷ್ಟು ನರ್ಸ್ ಗಳು ಮಂಗಳೂರಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ದುಡಿಯುತ್ತಿದ್ದಾರೆ. ಬೆಳಗ್ಗೆಯೇನೋ ಇವರು ಎದ್ದುಬಿದ್ದು ಗಡಿಬಿಡಿಯಿಂದ ಹೊರಟು ಸರಕಾರ ವ್ಯವಸ್ಥೆ ಮಾಡಿದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಂಗಳೂರಿಗೆ ಬರುತ್ತಾರೆ. ಡ್ಯೂಟಿ ಸಮಯಕ್ಕಿಂತ ಸಾಕಷ್ಟು ಮುಂಚೆಯೇ ಆರೋಗ್ಯ ಕೇಂದ್ರಗಳನ್ನು ತಲುಪುತ್ತಾರೆ. ಹಗಲಿಡೀ ರಾಶಿ ರಾಶಿ ಕೊರೊನಾ ಸೋಂಕಿತರ ನಡುವೆ ಕಾರ್ಯನಿರ್ವಹಿಸುತ್ತಾರೆ. ಆದರೆ ಡ್ಯೂಟಿ ಮುಗಿದ ಬಳಿಕ ವಾಪಸ್ ಮನೆಗೆ ಹೋಗಬೇಕಲ್ಲ? ಇವರು ಹೇಗೆ ತಮ್ಮ ಮನೆಯೆಂಬ ಗೂಡು ಸೇರುತ್ತಾರೆ ಎನ್ನುವ ಕುರಿತು ಸರಕಾರವಾಗಲೀ, ಜಿಲ್ಲಾಡಳಿತವಾಗಲಿ, ಅವರು ಕೆಲಸ ಮಾಡುತ್ತಿರುವ ಜಿಲ್ಲಾ ಆರೋಗ್ಯ ಇಲಾಖೆಯಾಗಲಿ, ಕೊರೊನಾ ವಾರಿಯರ್ಸ್ ಎಂದು ಇದ್ದಲೆಲ್ಲ ಶ್ಲಾಘಿಸುವ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ನಮ್ಮ ಸಂಸದರು, ಶಾಸಕರಾಗಲಿ ಯೋಚಿಸಿದ್ದಾರೆಯೇ?
ಖಂಡಿತಾ ಇಲ್ಲ, ಇವರಿಗೆ ಈ ತರಹದ ಯೋಚನೆ, ಕಾಳಜಿ ಇದ್ದರೆ ನರ್ಸ್ ಗಳೆಂಬ ನಮ್ಮ ಹೆಣ್ಮಕ್ಕಳು ಕತ್ತಲೆಯಾದ ಬಳಿಕ ಸಿಕ್ಕ ಸಿಕ್ಕ ವಾಹನಗಳಿಗೆ ಕೈಹಿಡಿದು ರಾತ್ರಿ 8-  9 ಗಂಟೆ ಮನೆ ಸೇರುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಸರಕಾರ ಬೆಳಗ್ಗೆಯೇನೋ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಿದಂತೆ ಸಂಜೆಯೂ ಮಾಡಿದೆ. ಆದರೆ ಅದು 5- 5.30ಕ್ಕೆಮಂಗಳೂರಿನಿಂದ ಹೊರಟು ಆಗಿರುತ್ತದೆ. ಆದರೆ ನಮ್ಮ ದಾದಿಯರ ಕೆಲಸ ಈ ವೇಳೆಗೆ ಮುಗಿದಿರುವುದಿಲ್ಲ. ಇವರು ಕೆಲಸ ಮುಗಿಸಿ ಹೋಗುವಾಗ ಬಸ್ ಮಿಸ್ ಆಗಿರುತ್ತದೆ. ನಂತರದ ಇವರ ಯಾತ್ರೆ ಯಾತನಾಮಯವಾಗಿರುತ್ತದೆ.

ಪುತ್ತೂರು, ಬೆಳ್ತಂಗಡಿ ಹೋಗೋರು ದಾರಿ ಮಧ್ಯೆ ಸಂಚರಿಸುವ ಕಾರುಗಳ ಮಾಲೀಕರಲ್ಲಿ ಸಹಾಯ ಕೇಳಿ, ಅವರು ಹೋಗುವಲ್ಲಿ ವರೆಗೆ ಹೋಗಿ ಮಧ್ಯೆ ಇಳಿದು, ಅಲ್ಲಿಂದ ಮತ್ಯಾರ ವಾಹನ ಬರುತ್ತೋ ಎಂದು ಕಾದು ಮನೆ ಸೇರುತ್ತಾರೆ. ಈ ಹೆಣ್ಮಕ್ಕಳಿಗೆ ರಾತ್ರಿ ವೇಳೆ ಯಾವುದೇ ರಕ್ಷಣೆ ಇಲ್ಲ. ಹುಟ್ಟಿನಿಂದ ನೋಡದ ಅಪರಿಚಿತ ಮುಖದ ವಾಹನ ಸವಾರರ ಜತೆ ಇವರು ಯಾನ ಮಾಡಬೇಕಾಗುತ್ತದೆ.

ಈ ಬಗ್ಗೆ ದಾದಿಯರು ಹೇಳೋ ಪ್ರಕಾರ ಲ್ಯಾಬ್ ಗಳಿಗೆ ತೆರಳಲು ಒಂದು ವಾಹನ ನೀಡಲಾಗಿದೆ. ಅವರನ್ನು ಮನೆ ಸೇರಿಸುವ ಸರಿಯಾದ ವ್ಯವಸ್ಥೆ ಇಲ್ಲ. ಎಲ್ಲ ಹಾಸ್ಪಿಟಲ್, ಪ್ರಾಥಮಿಕ ಅರೋಗ್ಯ ಕೇಂದ್ರಗಳ ಸಿಬ್ಬಂದಿ, ಇತರ ಸರಕಾರಿ ಇಲಾಖೆಗಳ ಸಿಬ್ಬಂದಿಗಳಿಗೆ ಒಂದು ಕೆಎಸ್ಸಾರ್ಟಿಸಿ ಬಸ್ ಮಾತ್ರ ಇದೆ. ಉಸ್ತವಾರಿ ಸಚಿವರೇ, ಜನಪ್ರತಿನಿಧಿಗಳೇ, ಜಿಲ್ಲಾ ಆರೋಗ್ಯಾಧಿಕಾರಿಗಳೇ, ಪ್ಲೀಸ್ ನೋಟ್ ದೆಟ್ ಪಾಯಿಂಟ್. 

ಇತ್ತೀಚಿನ ಸುದ್ದಿ

ಜಾಹೀರಾತು