4:09 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಅಡ್ಡಗಲ್ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅಕ್ಕರೆಯ ಆರೈಕೆ: ಇಲ್ಲಿನ  ವೈದ್ಯಾಧಿಕಾರಿ ಅಂದ್ರೆ ಗ್ರಾಮಸ್ಥರಿಗೆ ಬಲು ಇಷ್ಟ!

28/05/2021, 15:23

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

info.reporterkarnataka@gmail.com

ಗ್ರಾಮೀಣ ಪ್ರದೇಶದ ಜನರು ಆಸ್ಪತ್ರೆ ಎಂದರೆ ಮಾರು ದೂರ ಅರಿಯುತ್ತಾರೆ. ಇದು ಆಪರೇಶನ್ ಮಾಡುವ, ಇಂಜೆಕ್ಷನ್ ಕೊಡುವ ಸ್ಥಳ ಎಂದು ಭಯಪಟ್ಟು ಕೊಳ್ಳುತ್ತಾರೆ. ಇಂತಹ ಸನ್ನಿವೇಶದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಮಂದಿ ಬಂದು ಆರೋಗ್ಯ ಸೇವೆ ಪಡೆಯುತ್ತಾರೆ. ಇದಕ್ಕೆಲ್ಲ ಕಾರಣ ಇಲ್ಲಿನ ವೈದ್ಯಾಧಿಕಾರಿಗೆ ರೋಗಿಗಳ ಮೇಲಿನ ಪ್ರೀತಿ ಮತ್ತು ಕಾಳಜಿ.ಜೀವನವೆಂದ ಮೇಲೆ ಸುಖ, ಕಷ್ಟ , ಸ್ವಾಸ್ಥ , ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮ ಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರವ ಶತ್ರುವಿನಂತೆ ಕಾಣುವಂತವರು ಇದ್ದಾರೆ. ಗ್ರಾಮೀಣ ಭಾಗದ ನಾಗರಿಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ , ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯದ ವಾತವರಣ ಹಾಗೂ ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆ ಗಳನ್ನು ಮಾಡಿ ಮಾನಸಿಕವಾಗಿ ಹಿಂಸೆಯಾಗುತ್ತದೆ ಹಾಗೂ ಜೇಬು ಖಾಲಿಯಾಗುತ್ತದೆ ಎನ್ನುವಂತಹ ಮನೋಭಾವವಿದೆ. ಇನ್ನು ಕೆಲವರು ಆಕಸ್ಮಿಕವಾಗಿ ಖಾಯಿಲೆ ಬಂದರೆ ಹಳ್ಳಿಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ , ನಗರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಕಾಯಿಲೆಯಿಂದ ಬಳಲುವ ಜನರಿದ್ದಾರೆ.

ಇಂತಹ ಸಮಯದಲ್ಲಿ ರಾಯಲ್ಪಾಡು ಹೋಬಳಿಯ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ಜನ ಬಂದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಮನಸ್ಸಿಗೆ ನೆಮ್ಮದಿ ನೀಡುವಂತಹ ಅತ್ಯುತ್ತಮ ಪರಿಸರವು ಆವರಣದಲ್ಲಿ ಸೃಷ್ಟಿಯಾಗಿದೆ.ಉತ್ತಮ ವಾತವರಣವು ಸೃಷ್ಟಿಯಾಗಲು ಸ್ಥಳೀಯ ಆರೋಗ್ಯ ಕೇಂದ್ರ ಸಿಬ್ಬಂದಿಯು ಮನಸವಾಚ ಕಾರ್ಯನಿರ್ವಹಿಸುತ್ತಿದೆ. ಇನ್ನು ವೈದ್ಯರು “ ವೈದ್ಯೋ ನಾರಾಯಣಹರಿಃ ” ಎಂಬಂತೆ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬರುವ ಅನಾರೋಗ್ಯವಂತರಿಗೆ ಅಕ್ಕರೆಯಿಂದ ಉತ್ತಮ ಚಿಕಿತ್ಸೆಯನ್ನು ನೀಡುತ್ತಾ , ರೋಗಿಯ ಸಮಸ್ಯೆಯನ್ನು ಆಲಿಸಿ, ಪರಿಶೀಲಿಸಿ ಸಮಸ್ಯೆಗೆ ತಕ್ಕಂತೆ ಕಡಿಮೆ ವೆಚ್ಚದ ಪರಿಹಾರದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಭಾಗದ ನಾಗರೀ ಕರೆಲ್ಲರ ಮನೆಮಾತಾಗಿದ್ದಾರೆ.

ಸಾಮಾನ್ಯವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. ಆದರೆ ಅಡ್ಡಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು ಸಾದಾ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂಬ ಮಾತು ಈ ಭಾಗದ ನಾಗರೀಕರಲ್ಲಿ ಕೇಳಿ ಬರುತ್ತದೆ.

ಕೊರೊನಾ ರೋಗದ ಬಗ್ಗೆ ಭಯ ಬೇಡ ಎಚ್ಚರದಿಂದ  ಇದ್ದರೆ ಸಾಕು . ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ ಇಲ್ಲಿನ ವೈದ್ಯಾಧಿಕಾರಿ ಡಾ. ಕೆ.ಆರ್‌.ಕವಿತಾ.

ಇತ್ತೀಚಿನ ಸುದ್ದಿ

ಜಾಹೀರಾತು