12:23 AM Friday3 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ: ಕೋಲಾರದಲ್ಲಿ ಕೇಂದ್ರ ಸರಕಾರ ವಿರುದ್ಧ ರೈತ ಸಂಘ ಪ್ರತಿಭಟನೆ

28/10/2021, 10:33

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ 

info.reporterkarnataka@gmail.com

ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ರೈತ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೆಟ್ರೋಲ್ ಡೀಸಲ್ ಅಡುಗೆ ಅನಿಲವನ್ನು ಬೆಳ್ಳಿ ರಥದಲ್ಲಿ ಗಾಂಧಿ ವನದಿಂದ ಚಂಪಕ್ ಸರ್ಕಲ್‍ವರೆಗೆ ಮೆರವಣಿಗೆ ಮಾಡಿ ಪ್ರತಿಭಟಿಸಲಾಯಿತು.

ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಯವರಿಗೆ ಬೆಲೆ ನಿಯಂತ್ರಣ ಮಾಡಲು ಮನವಿ ನೀಡಿ ಆಗ್ರಹಿಸಲಾಯಿತು.

ರೈತರು ಬೆಳೆದ ಬೆಳೆ ಮಳೆನೀರು ಪಾಲು, ಬಡವರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ನರೇಗ ಜೆ.ಸಿ.ಬಿ ಪಾಲು, ಎಣ್ಣೆಕಾಳು ಅಗತ್ಯ ವಸ್ತುಗಳು ಅಂಬಾನಿ, ಅದಾನಿ ಪಾಲು, ಬಡವರು ಕೂಲಿ ಮಾಡಿದವರು ಕೈಗೆ ಸಿಗದ ಅಗತ್ಯ ವಸ್ತುಗಳಿಂದ ಹಸಿವಿನಿಂದ ನರಳುವ ಮಟ್ಟಕ್ಕೆ ಸರ್ಕಾರ ಶ್ರೀಮಂತಿಕೆಯ ನಡೆಸುತ್ತಿದೆ ಎಂದು ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ
ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಅವರು ಕಚ್ಚಾ ವಸ್ತುಗಳ ಬೆಲೆ ಏರಿಕೆ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯ ವಿರುವ ರಸಗೊಬ್ಬರ ಬಿತ್ತನೆ ಬೀಜ ಕೀಟನಾಶಕಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಅಡ ಇಟ್ಟು, ಸಂಬಂಧಪಟ್ಟ ಅಧಿಕಾರಿಗಳನ್ನು ಕಂಪನಿಗಳ ಗುಲಾಮರಾಗಿ ಮಾಡುವ ಜೊತೆಗೆ ಇಡೀ ಕೃಷಿ ಕ್ಷೇತ್ರವನ್ನೇ ಅಂಬಾನಿ ಅದಾನಿಗೆ ಅಡವಿಟ್ಟು ತುತ್ತು ಅನ್ನಕ್ಕಾಗಿ ಹೊರ ದೇಶದ ಬಳಿ ಕೈಚಾಚುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಮದ್ಯರಾತ್ರಿ ಸ್ವಾತಂತ್ರ್ಯ ರಾಜಕಾರಣಿಗಳಿಗೆ ಬಂತು ದೇಶವನ್ನು ಗುಲಾಮಗಿರಿಗೆ ಮತ್ತೆ ತಳ್ಳುವ ಸ್ವಾತಂತ್ರ್ಯ ಎಂಬತಾಗಿದೆ. ಬಿ.ಜೆ.ಪಿ ಸರ್ಕಾರದ ಜನ ವಿರೋದಿ ನೀತಿಯೆಂದು ವಂಗ್ಯವಾಡಿದರು.

ಪ್ರಕೃತಿ ಮುನಿದರೆ ಮಾನವ ಯಾವ ರೀತಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು ಎಂಬುದಕ್ಕೆ ಕಣ್ಣಿಗೆ ಕಾಣದ ವೈರಸ್ ಅಟ್ಟಹಾಸ ಇನ್ನು ಜನ ಸಾಮಾನ್ಯರಿಗೆ ಬುದ್ದಿ ಬಂದಂತಿಲ್ಲ. ಪರಿಸರ ಉಳಿಸಬೇಕಾದ ಸರ್ಕಾರಕ್ಕೆ ಪರಿಜ್ಞಾನ ವಿಲ್ಲದೆ, ಮತ್ತೆ ಅರಣ್ಯ ಮರಗಳನ್ನು ನಾಶ ಮಾಡುವುದಕ್ಕೆ ಅಡಿಗೆ ಅನಿಲದ ಬೆಲೆ ಸಂಚುರಿ ಬಾರಿಸುವ ಮಟ್ಟಕ್ಕೆ ಏರಿಕೆ ಮಾಡುವ ಮುಖಾಂತರ ಮತ್ತೆ ಪುರಾತನ ಕಾಲದ ಸೌದೆ ವಲೆಯನ್ನೇ ಅವಲಂಬಿಸಬೇಕಾದ ಪರಿಸ್ತಿತಿ ಸರ್ಕಾರ ಒದಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಅಗತ್ಯ ವಸ್ತುಗಳ ನಿಯತ್ರಣಕ್ಕೆ ಕಾನೂನು ಜಾರಿ ಮಾಡಲು ಯೋಗ್ಯತೆ ಇಲ್ಲದ ಸರ್ಕಾರ ತೈಲಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಪೆಟ್ರೋಲ್ ಡೀಸಲ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತಂದರೆ ಜನರಿಗೆ ಹೊರೆ ಯಾಗುತ್ತಿರುವ ಬೆಲೆ ಏರಿಕೆಯಿಂದ ರಕ್ಷಣೆ ಮಾಡಬಹುದೆಂದು ಸಲಹೆ ನೀಡಿದರು.

ಒಂದುವಾರದೊಳಗೆ ನಿರಂತರವಾಗಿ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಹಾಗೂ ಪೆಟ್ರೋಲ್ ಡೀಸಲ್ ಅಡಿಗೆ ಅನಿಲಕ್ಕೆ ಕಡಿವಾಣ ಹಾಕದೇ ಇದ್ದರೆ, ಮುಂದಿನ ಜಿಲ್ಲಾ ಪಂಚಾಯತ್ , ತಾಲೂಕು  ಪಂಚಾಯತ್ ಎಂ.ಎಲ್.ಎಲ್ ಚುನಾವಣೆಗಳಲ್ಲಿ ಮತ ಕೇಳಲು ಬರುವ ಬಿ.ಜೆ.ಪಿ ಪ್ರತಿನಿಧಿಗಳನ್ನು ಕಂಬಗಳಿಗೆ ಕಟ್ಟು ಹಾಕುವ ಚಳುವಳಿ ಮಾಡುವ ಎಚ್ಚರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡುವ ಮುಖಾಂತರ ಮನವಿ ನೀಡಿ, ಆಗ್ರಹಿಸಿದರು.

ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ವಿಲಿಯಂ ಅವರು ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಕಳುಹಿಸುವ ಭರಸವೆಯನ್ನು ನೀಡಿದರು.

ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಮಾಲೂರು ತಾ.ಅದ್ಯಕ್ಷ ಮಾಸ್ತಿ ವೆಂಕಟೇಶ್, ಯಲ್ಲಣ್ಣ, ಹರೀಶ್, ಆಂಜಿನಪ್ಪ, ತೆರ್ನಹಳ್ಳಿ ಆಂಜಿನಪ್ಪ, ತೆರ್ನಹಳ್ಳೀ ವೆಂಕಿ, ಮಂಗಸಂದ್ರ ನಾಗೇಶ್, ಕಿರಣ್, ಚಲಪತಿ, ಚಾಂದ್‍ಪಾಷ, ಚಂದ್ರಪ್ಪ, ಕೆಂಪರೆಡ್ಡಿ, ಬಾಬಾಜನ್, ವೇಣು, ನವೀನ್, ಕೇಶವ, ಮೂರಾಂಡಹಳ್ಳಿ ಶಿವಾರೆಡ್ಡಿ, ರಾಮಕೃಷ್ಣಪ್ಪ, ನಾಗಯ್ಯ, ಭೀಮಗಾನಹಳ್ಳಿ ಮುನಿರಾಜು, ರಾಮಸಮದ್ರ ವೇಣುಗೋಪಾಲ್, ಸಂದೀಪ್, ಮನೋಹರ್, ಚೌಡಮ್ಮ, ನಾಗರತ್ನಮ್ಮ, ರಾಧ, ಮುಂತಾದವರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು