ಇತ್ತೀಚಿನ ಸುದ್ದಿ
ಮಂಗಳೂರು: ಆಳ ಸಮುದ್ರ ಮೀನುಗಾರಿಕೆಯಲ್ಲಿ 1400 ಕೆಜಿ ತೂಕದ ಭಾರಿ ಗಾತ್ರದ ‘ವೆಲ್ ಶಾರ್ಕ್’ ಬಲೆಗೆ
26/10/2021, 19:55

ಮಂಗಳೂರು(reporterkarnataka.com): ಆಳ ಸಮುದ್ರ ಮೀನುಗಾರರ ಬಲೆಗೆ ಅಪರೂಪದ ಸಮುದ್ರ ಜೀವಿ ಎನ್ನಲಾದ ‘ವೇಲ್ ಶಾರ್ಕ್’ ಮೀನು ಬಿದ್ದಿದೆ.
ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಟ್ರಾಲ್ ಬೋಟ್ ಬಲೆಗೆ ಆಹಾರ ಅರಸಿ ಬಂದ ‘ವೇಲ್ ಶಾರ್ಕ್’ ಮೀನು ಸಿಕ್ಕಿದ್ದು,1,400 ಕೆಜಿ ಗಾತ್ರದ ಭಾರೀ ಗಾತ್ರದ ಈ ಮೀನು ಬಲು ಅಪರೂಪ. ಅರಬ್ಬಿ ಸಮುದ್ರದಲ್ಲಿ ಅತಿ ಅಪರೂಪಕ್ಕೆ ಕಾಣ ಸಿಗುತ್ತದೆ. ಜೊತೆಗೆ ಈ ಮೀನು ಸದ್ಯ ಅಳಿವಿನಂಚಿನಲ್ಲಿದೆ.
ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ ಕಾರಣವಾಗಿದೆ. ಬಲೆಗೆ ಬಿದ್ದ ಅಪರೂಪದ ಸಮುದ್ರ ಜೀವಿ ಕಂಡು ಸಂತಸ ಪಟ್ಟ ಮೀನುಗಾರರು ವೇಲ್ ಶಾರ್ಕ್ ನ್ನು ಮರಳಿ ಕಡಲಿಗೆ ಬಿಟ್ಟಿದ್ದಾರೆ.