7:17 AM Sunday7 - June 2026
ಬ್ರೇಕಿಂಗ್ ನ್ಯೂಸ್
Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ…

ಇತ್ತೀಚಿನ ಸುದ್ದಿ

ಕ್ರಷರ್ ಗಣಿಗಾರಿಕೆಯ ಕಾನೂನು ತೊಡಕು ನಿವಾರಿಸಿ ಉದ್ಯಮಸ್ನೇಹಿಯಾಗಿಸಲು ನಾವು ಬದ್ದ: ರಾಜ್ಯಾದ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ

23/10/2021, 19:47

ಕಾರ್ಕಳ(reporterkarnataka.com): ಯಾವುದೇ ಕ್ರಷರ್ ಗಳು ಅಕ್ರಮವಾಗಿಲ್ಲ , ಸರಕಾರದ ಕಾನೂನು ನಿಯಾಮವಳಿಗಳಲ್ಲಿ ಲೋಪವಿದೆ. ಕ್ರಷರ್ ಗಣಿಗಾರಿಕೆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಉದ್ಯಮ ಸ್ನೇಹಿ ಯಾಗಿಸುವ ಕಾರ್ಯಕ್ಕೆ ನಾವು ಬದ್ದ  ಎಂದು ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು .

ಕಾರ್ಕಳ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚಾ ವಸ್ತುಗಳಾದ ಜಲ್ಲಿ ಮರಳು ಕಲ್ಲುಗಳನ್ನು   ವಿವಿಧ ಕೈಗಾರಿಕೆ ಕಟ್ಟಡ ಗಳಿಗೆ  ಪೂರೈಸುವ, ಕ್ವಾರಿ  ಉದ್ಯಮವು ಲಕ್ಷಾಂತರ ಜನರಿಗೆ ನೇರ ಹಾಗು ಪರೊಕ್ಷವಾಗಿ ಉದ್ಯೋಗ ವನ್ನು ನೀಡಿವೆ. ಆದರೆ ಸರಕಾರದ ಕೆಲವು ಅಸಮರ್ಪಕವಾದ ಕಾನೂನುಗಳಿಂದ ಕಚ್ಚಾವಸ್ತುಗಳ  ಸಾಗಾಣಿಕೆ ಹಾಗೂ ಕಲ್ಲುಗಣಿಗಾರಿಕೆಗಳಿಗೆ ತೊಂದರೆಯಾಗುತ್ತಿದ್ದು, ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರಿಗೂ ಸಮಸ್ಯೆ ಯಾಗುತ್ತಿದ್ದು, ಅದಕ್ಕಾಗಿ  ಸರಕಾರ ಕಾನೂನು ತೊಡಕುಗಳನ್ನು ನಿವಾರಿಸಿ ಕಚ್ಚಾವಸ್ತುಗಳನ್ನು ಪೂರೈಸಲು ಅನುವು ಮಾಡಲು ಸರಕಾರ ಯೋಗ್ಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು.   

ಎಲ್ಲ ಗುತ್ತಿಗೆದಾರರು ಎಲ್ಲಾ ವಲಯದ ಕ್ರಷರ್ ಗಳಿಂದ ಪೂರೈಕೆಯಾಗುವ ಕಚ್ಚಾವಸ್ತುಗಳನ್ನು ಪೂರೈಸುವ ಕೈಗಾರಿಗಳಿಗೂ ತನ್ನ ಚೌಕಟ್ಟಿನೊಳಗೆ ಗಣಿಗಾರಿಗೆ ಕಾನೂನು ಸ್ನೇಹಿಯಾಗಿ ನಿರ್ವಹಿಸಿ ಸರಕಾರಕ್ಕೆ ಸಂದಾಯವಾಗುವ ರಾಜಸ್ವವು ಹೆಚ್ಚುತ್ತದೆ.  ಕ್ವಾರಿ ಕ್ರಷರ್  ಉದ್ಯಮದ ಬೇಡಿಕೆ ಏನೆಂದರೆ ಕಾನೂನು ಚೌಕಟ್ಟಿನೊಳಗೆ ಉದ್ಯಮ ನಡೆಸಲು ಅವಕಾಶ ಕೊಡಿ, ಎಲ್ಲರೂ ಕಾನೂನು ಬದ್ದವಾಗಿ  ಉದ್ಯಮ ನಡೆಸಲು ತಯಾರಿದ್ದಾರೆ, ಅದಕ್ಕೆ ಪೂರಕವಾದ ನಿಯಮಗಳಿಲ್ಲ ,ಆದ್ದರಿಂದ ಗಣಿಗಾರಿಕೆ ಹಿನ್ನಡೆ ಯಾಗುತ್ತಿದೆ ಎಂದರು. ಆದರೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪ ಹೋರಿಸುವುದು ಸರಿಯಲ್ಲ.ಆದರೆ ಸರಕಾರದ ಕಾನೂನಿನಲ್ಲಿ ಸಮಸ್ಯೆ ಇದೆ ಆದ್ದರಿಂದ ಮುಂದಿನ ಮೂರು ತಿಂಗಳ ಒಳಗೆ ಕ್ರಷರ್ ಹಾಗೂ ಕ್ವಾರಿಗಳಿಗಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು