10:25 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಗ್ರಾಪಂ ಸದಸ್ಯನ ಸಮ್ಮುಖದಲ್ಲೇ ಮದುವೆ – ಡಿಜೆ ಪಾರ್ಟಿ: ಕೊರೊನಾದ ಭೀತಿಯಲ್ಲಿ ಪಾವೂರು ಗ್ರಾಮಸ್ಥರು

27/05/2021, 23:46

ಮಂಗಳೂರು(reporterkarnataka news):ಕೊರೊನಾ ಕುರಿತು ಜಾಗೃತಿ ಮೂಡಿಸಬೇಕಾದ ಪಂಚಾಯಿತಿ ಸದಸ್ಯರೊಬ್ಬರ ಬೇಜವಾಬ್ದಾರಿತನದಿಂದ ಕೊರೊನಾ ಹಾಟ್ ಸ್ಪಾಟ್  ಆಗಿ ಬದಲಾಗುವ ಭೀತಿಯನ್ನು ಪಾವೂರು ಗ್ರಾಮಸ್ಥರು ಎದುರಿಸುತ್ತಿದ್ದಾರೆ.ಪಾವೂರು ಪಂಚಾಯಿತಿ ಸದಸ್ಯನ ಸಮ್ಮುಖದಲ್ಲಿ ಮದುವೆ ಹಾಗೂ ಡಿಜೆ ಪಾರ್ಟಿ ನಡೆದಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಮದುವೆಯಲ್ಲಿ ಗ್ರಾಮದ ಮತ್ತು ಹೊರ ಭಾಗದ. ಹಲವು ಮಂದಿ  ಭಾಗವಹಿಸಿದ್ದಾರೆ. ಇವರಲ್ಲಿ ಕೊರೊನಾ ಸೋಂಕಿತರು ಕೂಡ ಇದ್ದರು ಎನ್ನಲಾಗಿದೆ. ಪಾವೂರು ಗ್ರಾಮದ ವ್ಯಕ್ತಿಯ ಹೆಸರಿನಲ್ಲಿ ಮದುವೆಯ ಅನುಮತಿಯನ್ನು ಪಡೆದು ಪರವೂರಿನ ಜೋಡಿಯನ್ನು ತಂದು ಕಾನೂನು ಬಾಹಿರವಾಗಿ ಮದುವೆ ಮಾಡಿಸಿದ್ದು, ಈ ಮದುವೆ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರು ಭಾಗಿಯಾಗಿರುತ್ತಾರೆ, ಇದು ಅಲ್ಲದೆ ಹಲವಾರು ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ವೇಲೇರಿಯನ್ ಡಿಸೋಜ ಅವರು ಗ್ರಾಮದ ಹಲವಾರು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇವರ ಇಂತಹ ಬೇಜವಾಬ್ದಾರಿತನದಿಂದ ಪಾವೂರು ಗ್ರಾಮದಲ್ಲಿ ಕೊರೊನಾ ಹರಡುವ ಭೀತಿ ಉಂಟಾಗಿದೆ. ಈ ಕಾರ್ಯಕ್ರಮದ ನಂತರ ಈ ಊರಿನಲ್ಲಿ ಹಲವಾರು ಜನರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಸಾರ್ವಜನಿಕರು ಭಯಭೀತಗೊಂಡಿದ್ದಾರೆ. ಇವರನ್ನು ಕೊರೊನಾ

 ಪರೀಕ್ಷೆ ಮಾಡಿಸಬೇಡಿ ಎಂದು ಸ್ವತಃ ಟಾಸ್ಕ್ ಫೋರ್ಸ್ ಸದಸ್ಯರೇ ಮನವಿ ಮಾಡಿರುವ ಬಗ್ಗೆ ಮಾಹಿತಿ ಇದೆ.  ಪರೀಕ್ಷೆಗೆ ಒಳಪಡದ ಜನರು ರಾಜಾರೋಷವಾಗಿ ಗ್ರಾಮದಲ್ಲಿ ತಿರುಗುತ್ತಿದ್ದಾರೆ. ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದೆಲ್ಲಾ ಗೊತ್ತಿದ್ದೂ ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು  ಮತ್ತು ಉಪಾಧ್ಯಕ್ಷರು ಜಾಣಕುರುಡು ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು