ಇತ್ತೀಚಿನ ಸುದ್ದಿ
ಕೊರೊನಾ ಬಿಕ್ಕಟ್ಟು: 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ
26/04/2021, 09:57
ನವದೆಹಲಿ(reporterkarnataka news):
ಪ್ರಸಕ್ತ ದೇಶ ಎದುರಿಸುತ್ತಿರುವ ಕೊರೋನಾ ಬಿಕ್ಕಟ್ಟು ನಿವಾರಿಸಲು 135 ಕೋಟಿ ರೂ. ನೆರವು ನೀಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಸುಂದರ್ ಪಿಚೈ, ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು, ಈ ಪರಿಸ್ಥಿತಿ ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಪಿಚೈ ಟ್ವೀಟ್ ಮಾಡಿದ್ದಾರೆ.
ಗೂಗಲ್ ಶೀಘ್ರವೇ ಭಾರತಕ್ಕೆ ವೈದ್ಯಕೀಯ ಸರಬರಾಜು, ಅಪಾಯದಲ್ಲಿರುವ ಸಮುದಾಯಗಳಿಗೆ ಬೆಂಬಲ ನೀಡುವ ಉದ್ದೇಶದಿಂದ 135 ಕೋಟಿ ರೂ. ಅನುದಾನ
ನೀಡಲಿದೆ ಎಂದು ಅವರು ತಿಳಿಸಿದ್ದಾರೆ.