12:57 AM Sunday27 - September 2026
ಬ್ರೇಕಿಂಗ್ ನ್ಯೂಸ್
ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ…

ಇತ್ತೀಚಿನ ಸುದ್ದಿ

ಎನ್ನೆಸ್ಸೆಸ್, ನೆಹರು ಯುವ ಕೇಂದ್ರದ ವತಿಯಿಂದ  ಮಂಗಳೂರು ಹೃದಯ ಭಾಗದಲ್ಲಿ ಸ್ವಚ್ಛತಾ ಅಭಿಯಾನ 

20/10/2021, 11:37

ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಹಾಗೂ ರೋಟರಿ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಅಭಿಯಾನ ಜರುಗಿತು. 


ಮಂಗಳೂರು ವಿಶ್ವ ವಿದ್ಯಾನಿಲಯದ  ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ  ಕೆ. ಎ., ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ, ರೋಟರಿ ಕ್ಲಬ್ ನ ಡಾ. ರಂಜನ್ ಹಾಗೂ ಕಾನ್ಯೂಟ್ ಪಿಂಟೋ ಸ್ವಚ್ಛತಾ ಅಭಿಯಾನದಲ್ಲಿ ಉಪಸ್ಥಿತರಿದ್ದರು. 


ಸುತ್ತ ಮುತ್ತ ಅಂಗಡಿಗಳ ಮಾಲೀಕರಿಗೆ ತಮ್ಮ ಸುತ್ತ ಮುತ್ತ ಪ್ಲಾಸ್ಟಿಕ್ ಎಸೆಯದಂತೆ ಮನವರಿಕೆ ಮಾಡಲಾಯಿತು. 


ವಿಶ್ವ ವಿದ್ಯಾನಿಲಯ ಕಾಲೇಜಿನ ಹಾಗೂ ರಥ ಬೀದಿ ಪ್ರಥಮ ದರ್ಜೆ ಕಾಲೇಜಿನ ರಾ. ಸೇ.ಯೋ ಸ್ವಯಂ ಸೇವಕ, ಸೇವಕಿಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು