ಇತ್ತೀಚಿನ ಸುದ್ದಿ
ಇಡೀ ಮಂಗಳೂರು ದಸರಾ ಸಂಭ್ರಮದಲ್ಲಿ ತೇಲುತ್ತಿದ್ದರೆ, ಇತ್ತ ನಡೆದೇ ಬಿಟ್ಟಿತು ಗೆಳೆಯನ ಹತ್ಯೆ: ಯಾಕಾಗಿ ನಡೆಯಿತು ಈ ಕೊಲೆ?
16/10/2021, 09:36

ಮಂಗಳೂರು(reporterkarnataka.com): ಇಡೀ ಮಂಗಳೂರು ದಸರಾ ಸಂಭ್ರಮದಲ್ಲಿ ತಲ್ಲೀಣವಾಗಿದ್ದರೆ, ಇತ್ತ ನಗರದ ಒಂದು ಮೂಲೆಯಲ್ಲಿ ಯುವಕನೊಬ್ಬನ ಹತ್ಯೆ ತಣ್ಣಗೆ ನಡೆದೇ ಬಿಟ್ಟಿದೆ. ಗೆಳೆಯನೇ ಈ ಕೊಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
6 ಮಂದಿ ಗೆಳೆಯರ ತಂಡ ದಸರಾ ನಿಮಿತ್ತ ಪಾರ್ಟಿ ಮಾಡಲು ಸೇರಿದ್ದರು. ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಅವರು ಒಟ್ಟು ಸೇರಿದ್ದರು. ಪ್ರಮೀತ್, ಜೇಸನ್, ಕಾರ್ತಿಕ್, ಧನಿಷ್ ,ದುರ್ಗೇಶ್ ಮತ್ತು ಪ್ರಜ್ವಲ್ ಎಂಬವರು ದಸರಾ ಪ್ರಯುಕ್ತ ಪಾರ್ಟಿ ಮಾಡಲು ಒಟ್ಟು ಸೇರಿದ್ದರು. ತಡರಾತ್ರಿ ವೇಳೆ ಜೇಸನ್ ಮತ್ತು ಧನುಷ್ ಪಚ್ಚನಾಡಿ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಜೇಸನ್ ಚೂರಿಯಿಂದ ಧನುಷ್ ಗೆ ಇರಿದೇ ಬಿಟ್ಟ. ತೀವ್ರವಾಗಿ ಗಾಯಗೊಂಡ ಧನುಷ್ ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿತಾಗದೆ ಆತ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಾಗಿದೆ.