ಇತ್ತೀಚಿನ ಸುದ್ದಿ
ಪೂಜಾರಿ ಬದ್ದತೆಯುಳ್ಳ ಬಡವರಪರ ಕಾಳಜಿಯ ಜನ ನಾಯಕ: ಮುಖ್ಯಮಂತ್ರಿ ಬೊಮ್ಮಾಯಿ ಶ್ಲಾಘನೆ
13/10/2021, 19:04
ಮಂಗಳೂರು(reporterkarnataka.com): ಬಿ. ಜನಾರ್ಧನ ಪೂಜಾರಿ ಅವರು ಹಿರಿಯ ನಾಯಕರು. ಬದ್ದತೆಯುಳ್ಳ ರಾಜಕಾರಣಿ. ಎಲ್ಲಕ್ಕಿಂತ ಮಿಗಿಲಾಗಿ ಅವರ ಬಡವರ ಸೇವೆ ಅತ್ಯಂತ ಮಹತ್ವದ್ದು. ನನ್ನ ಮೇಲೆ ಪ್ರೀತಿ ಇಟ್ಟು ಆಹ್ವಾನಿಸಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ನನ್ನ ತಂದೆ ಎಸ್. ಆರ್. ಬೊಮ್ಮಾಯಿ ಜತೆ ಪೂಜಾರಿ ಅವರು ನಿಕಟ ಒಡನಾಟ ಹೊಂದಿದ್ದನ್ನು ಸ್ಮರಿಸಿದರು.