10:33 PM Thursday16 - January 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಬೆಸೆಂಟ್ ಕಾಲೇಜಿನಲ್ಲಿ ಏಡ್ಸ್ ಸಂಬಂಧಿತ ರಸ ಪ್ರಶ್ನೆ ಕಾರ್ಯಕ್ರಮ: ಮನೀಶ್ ಬಿ. ಕೆ., ಜಯಶ್ರೀ ಎಂ.ಸಿ. ಪ್ರಥಮ

13/10/2021, 17:58

ಮಂಗಳೂರು(reporterkarnataka.com):  ದ. ಕ.  ಜಿಲ್ಲಾ ಏಡ್ಸ್  ನಿಯಂತ್ರಣ ಇಲಾಖೆ ಹಾಗೂ  ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬೆಸೆಂಟ್ ಕಾಲೇಜಿನ ಎನ್ ಎಸ್ ಎಸ್ ಘಟಕದ  ಸಹಯೋಗದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಿಗೆ ಏಡ್ಸ್ ಸಂಬಂಧಿತ ರಸ ಪ್ರಶ್ನೆ ಕಾರ್ಯಕ್ರಮ ಬೆಸೆಂಟ್ ಕಾಲೇಜಿನಲ್ಲಿ ಜರುಗಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಏಡ್ಸ್ ನಿಯಂತ್ರಣ ಇಲಾಖೆಯ ಅಧಿಕಾರಿ ಡಾ. ಬದ್ರುದ್ದೀನ್ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ. ಮಾತನಾಡಿ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿಯೇ ರಾಷ್ಟ್ರೀಯ ಸೇವಾ ಯೋಜನೆ ಎಂದರು.





ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಶೆಟ್ಟಿ ಮಾತನಾಡಿ, ವ್ಯಕ್ತಿತ್ವ ಮತ್ತು ಸೇವಾ ಮನೋಭಾವನೆಯನ್ನು ಬೆಳೆಸುವ ರಾ. ಸೇ. ಯೋ ಇಂದು ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದು  ಶ್ಲಾಘನೀಯ ಎಂದರು.

ಕಾಲೇಜಿನ ಕರೆಸ್ಪಾಂಡೆಂಟ್ ದೇವಾನಂದ ಪೈ, ಹಾಗೂ ಸಂಚಾಲಕ ಗಣೇಶ್ ಭಟ್, ಯೋಜನಾಧಿಕಾರಿ ರವಿ ಪ್ರಭಾ  ಉಪಸ್ಥಿತರಿದ್ದರು. 


ಏಡ್ಸ್ ನಿಯಂತ್ರಣ ಇಲಾಖೆಯ ಮೇಲ್ವಿಚಾರಕ ಮಹೇಶ್ ಹಾಗೂ ಸಿಬ್ಬಂದಿಗಳು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. 

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಕಾಲೇಜಿನ ಮನೀಶ್ ಬಿ. ಕೆ. , ಜಯಶ್ರೀ ಎಂ.ಸಿ.  ಪ್ರಥಮ ಬಹುಮಾನ ಪಡೆದರು. ವಿಶ್ವವಿದ್ಯಾನಿಲಯ ಕಾಲೇಜಿನ ರಾಧಿಕಾ ಹಾಗೂ ಅಕ್ಷಿತ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಬೆಟ್ಟಂಪ್ಪಾಡಿ ಸ. ಪ್ರ. ದರ್ಜೆ ಕಾಲೇಜಿನ ಸಾರ್ಥಕ್. ಟಿ ,ರಕ್ಷಿತ್.ಎ. ರೈ ಪಡೆದು ಕೊಂಡಿದ್ದಾರೆ.

ಕಾಲೇಜಿನ ರಾ.ಸೇ.ಯೋ ಸ್ವಯಂ ಸೇವಕರಾದ ಅಮೃತಾ, ಭೂಮಿಕಾ, ಕಾರ್ಯಕ್ರಮ ನಿರೂಪಿದರು.

ಇತ್ತೀಚಿನ ಸುದ್ದಿ

ಜಾಹೀರಾತು