ಇತ್ತೀಚಿನ ಸುದ್ದಿ
Breaking | ನಿರಂತರ ಮಳೆಯಿಂದ ಪೊಳಲಿ ಸಮೀಪ ಎರಡಂತಸ್ತಿನ ಮನೆ ಕುಸಿತ ; ತಪ್ಪಿದ ಭಾರಿ ದುರಂತ
13/10/2021, 12:05
ಮಂಗಳೂರು(ReporterKarnataka.com)
ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಮನೆಯೊಂದು ಕುಸಿದು ಬಿದ್ದ ಘಟನೆ ಮಂಗಳವಾರ ನಡೆದಿದೆ.
ಎಡಪದವು ನಿವಾಸಿ ರಂಜಿತ್ ಅವರು ಎರಡು ವರ್ಷಗಳ ಹಿಂದೆ ಪೊಳಲಿಯ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಮೀಪ ನಿವೇಶನ ಖರೀದಿಸಿ ಮನೆ ನಿರ್ಮಿಸುವ ಕಾರ್ಯ ಆರಂಭಿಸಿದ್ದರು.
ಎರಡು ಅಂತಸ್ತಿನ ಮನೆ ಇದಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿತ್ತು. ಮಂಗಳವಾರ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಕುಸಿತದ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.