ಇತ್ತೀಚಿನ ಸುದ್ದಿ
ಉಪ್ಪಿನಂಗಡಿ: ಚಲಿಸುತ್ತಿದ್ದ ಬಸ್ಸಿನಡಿಗೆ ಬಿದ್ದು ತಾಯಿ- ಮಗು ದಾರುಣ ಸಾವು; ಚಾಲಕ ಪೊಲೀಸ್ ವಶಕ್ಕೆ
12/10/2021, 19:04

ಉಪ್ಪಿನಂಗಡಿ(reporterkarnataka.com): ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿ ಮಂಗಳವಾರ ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ -ಮಗು ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿ ತಾಲ್ಲೂಕು ಸಾಹಿದ (25) ಮತ್ತು ಅವರ ಪುತ್ರ ಸಾಹಿಲ್(1) ಮೃತಪಟ್ಟವರು. ತಾಯಿ-ಮಗು ರಸ್ತೆ ದಾಟುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ಇವರ ಮೇಲೆ ಹರಿದಿದೆ.
ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.