12:09 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’:  ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಿದ್ಧಾರ್ಥ ಶೆಟ್ಟಿ ಹಾಗೂ ನೇಹಾ ಆರ್. ಆಯ್ಕೆ

11/10/2021, 22:25

ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಿದ್ಧಾರ್ಥ ಶೆಟ್ಟಿ ಬಿ.ಎಸ್.ಹಾಗೂ ನೇಹಾ ಆರ್. ಆಯ್ಕೆಗೊಂಡಿದ್ದಾರೆ.

ಸಿದ್ಧಾರ್ಥ್ ಶೆಟ್ಟಿ ಬಿ.ಎಸ್. ವಯಸ್ಸು ಬರೇ 7 ವರ್ಷ. ವಿದ್ಯಾ ವಿಕಾಸ್ ಪಬ್ಲಿಕ್ ಸ್ಕೂಲ್ ನ 2ನೇ ತರಗತಿ ವಿದ್ಯಾರ್ಥಿ ಈತ.

ತಂದೆ ಸಂಜು ಬಿ., ತಾಯಿ ರಂಜಿತಾ. ಸಿದ್ಧಾರ್ಥ್ ಗೆ ನೃತ್ಯ, ಅಭಿನಯ, ಕ್ರೀಡೆಯಲ್ಲಿ ಭಾರಿ ಆಸಕ್ತಿ.ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಈತ ಹಲವು ಬಹುಮಾನ ಗಳಿಸಿದ್ದಾನೆ. 

ಸಿದ್ಧಾರ್ಥ್ ಹುಟ್ಟಿದ್ದು ಮೈಸೂರಿನಲ್ಲಿ. ತಂದೆಯ ಹುಟ್ಟೂರು ಬೇಲೂರು. 4ರ ಹರೆಯದಲ್ಲಿ ಸಿದ್ದಾರ್ಥ್  ಡಾನ್ಸ್ ಕಲಿಯಲಾರಂಭಿಸಿದ. ನರ್ಸರಿ, LKG, UKGಯನ್ನು ಬೇಲೂರಿನ learning tree ಎಂಬ ಶಾಲೆಯಲ್ಲಿ ಪೂರೈಸಿದ. ಈಗ ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾನೆ.

ಸಿದ್ದಾರ್ಥ್  ತಂದೆ 11ತಿಂಗಳ ಹಿಂದೆ ರಸ್ತೆ ಅಪಘಾತ ದಲ್ಲಿ ಮೃತಪಟ್ಟರು. ಅವರ ಆಸೆ ಮಗನನ್ನು ದೊಡ್ಡ ಡಾನ್ಸರ್ ಮಾಡಬೇಕು ಎಂಬುದಾಗಿತ್ತು. ಅವರ ಆಸೆ ಈಡೇರಿಸಲು ತಾಯಿ ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಒಂದು ದೊಡ್ದ ವೇದಿಕೆಗೋಸ್ಕರ ಕಾಯುತ್ತಿದ್ದಾರೆ. ಝೀ ಕನ್ನಡದ ಆಡಿಷನ್ ನಲ್ಲಿ ಕೂಡ ಭಾಗವಹಿಸಿದ್ದರು.  

12ರ ಹರೆಯದ ಬೆಂಗಳೂರಿನ ನೇಹಾ ಆರ್.ವಿಜಯನಗರದ ನ್ಯೂ ಕೇಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾಳೆ. ರಂಗನಾಥ ಡಿ.ಎಲ್. ಹಾಗೂ ಸುಜಾತಾ ಸಿ. ದಂಪತಿಯ ಪುತ್ರಿಯಾದ ನೇಹಾ ಉದಯ ಟಿವಿಯ ಚಿಣ್ಣರ ಚಿಲಿಪಿಲಿ ಹಾಗೂ ಸುವರ್ಣ ಟಿವಿಯಲ್ಲಿ ತರ್ಲೆ ನನ್ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಬೆಂಗಳೂರು ವಿವಿ ಆಯೋಜಿಸಿದ ರಂಗ ಶಿಬಿರದಲ್ಲಿ ಎರಡು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದಾಳೆ.  ಸಂಚಾರಿ ಥಿಯೇಟರ್ ಆಯೋಜಿಸಿದ ರಂಗ ಶಿಬಿರದಲ್ಲಿ ಅಪರಾಧಿಯ ಕಥೆ ಎಂಬ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದಾಳೆ. ಜ್ಹೀ ಕನ್ನಡದ ಕಾಮಿಡಿ ಕಿಲಾಡಿಯಲ್ಲಿಯೂ ಪಾಲ್ಗೊಂಡಿದ್ದಾಳೆ.

ಫ್ಯಾಶನ್ ಶೋ, ಎರಡು ಆ್ಯಡ್ ಶೂಟ್ ನಲ್ಲಿ ಮಾಡೆಲ್ ಆಗಿ ಭಾಗವಹಿಸಿದ್ದಾಳೆ. ಇಷ್ಟೇ ಅಲ್ಲದೆ ಫ್ಯಾನ್ಸಿ ಡ್ರೆಸ್, ಹ್ಯಾಂಡ್ ರೈಟಿಂಗ್, ಕಲರಿಂಗ್,ಸ್ಪೋರ್ಟ್ ಮುಂತಾದುವುಗಳಲ್ಲಿ ಹಲವು ಪ್ರಶಸ್ತಿಗಳನ್ನು ಚಾಚಿಕೊಂಡಿದ್ದಾಳೆ. ನೇಹಾ ವಿಕಾಸ್ ಅವರ ‘ಬ್ಯೂಟಿಪುಲ್ ಡೇ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು