ಇತ್ತೀಚಿನ ಸುದ್ದಿ
ಮಂಗಳೂರಿನಲ್ಲೊಂದು ಶೂಟ್ ಔಟ್ ಪ್ರಕರಣ: ಕೆಲಸದಾಳುವಿಗೆ ಹೊಡೆದ ಗುಂಡು ಪುತ್ರನ ತಲೆ ಬಿತ್ತು!
05/10/2021, 18:31
ಮಂಗಳೂರು(reporterkarnataka.com) : ನಗರದ ಮೋರ್ಗನ್ ಗೇಟ್ ವೈಷ್ಣವಿ ಎಕ್ಸ್ ಪ್ರೆ ಸ್ ಕಾರ್ಗೋ ಪ್ರೈ.ಲಿ. , ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರು ಸಂಬಳ ಕೇಳಲು ಬಂದಿದ್ದು, ಸಿಟ್ಟಿಗೆದ್ದ ರಾಜೇಶ್ ಪ್ರಭು ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದು ಹಾರಿದ ಗುಂಡು ತಪ್ಪಿ ಅವರ ಮಗನ ತಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಮಗ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿದ್ದು ಗಾಯಗೊಂಡಿದ್ದಾರೆ. ಸಂಬಳ ಕೇಳಲು ಬಂದಿದ್ದ ಕೆಲಸದಾಳು ಅಪಾಯದಿಂದ ಪಾರಾಗಿದ್ದಾನೆ. ನಗರದ ಸ್ಥಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಆಗಮಿಸಿದ್ದಾರೆ.
ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಸ್ಥಳದಲ್ಲಿ ಸ್ವಲ್ಪ ಬಿಗುವಿನ ವಾತಾವರಣದಿಂದ ನಿರ್ಮಾಣ ವಾಗಿತ್ತು.














