6:54 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕೃಷಿ ಭೂಮಿ ವಶಕ್ಕೆ ನೋಟಿಸು: ರೊಚ್ಚಿಗೆದ್ದ ರೈತರಿಂದ ಯೋಜನಾ ಕಚೇರಿಗೆ ಮುತ್ತಿಗೆ; ಪೋಲಿಸರ ಮಧ್ಯಪ್ರವೇಶ

04/10/2021, 17:54

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯ ರಿ. ಸ ನಂ 839 ಹಾಗೂ ಅಕ್ಕ ಪಕ್ಕದ ಜಮೀನು ಸೇರಿದಂತೆ ಅಂದಾಜು 130 ಎಕರೆ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳುವ ನೋಟಿಸ್ ಬಂದ ಹಿನ್ನಲೆಯಲ್ಲಿ ಇಲಾಖೆಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಹಿಳೆಯರು ಮತ್ತು ಮಕ್ಕಳು ಹಿಪ್ಪರಗಿ ಅಣೆಕಟ್ಟು ಯೋಜನೆಯ ಕಚೇರಿಗೆ ಮುತ್ತಿಗೆ ಹಾಕಿ ಏಕಾಏಕಿ ಪ್ರತಿಭಟನೆ ನಡೆಸಿದರು.


ನೀರಾವರಿ ಅಧಿಕಾರಿಗಳೊಡನೆ ಮಾತಿನ ಚಕಮಕಿ ನಡೆಸಿ, ಪ್ರತಿಭಟನೆ ತೀವೃಗೊಂಡ ಹಿನ್ನಲೆ, ನೂಕು ನುಗ್ಗಲು ಉಂಟಾಗಿ ಪೋಲಿಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಸಂಗ ಜರುಗಿತು.

ನೆರೆ ಸಂತ್ರಸ್ತರ ಪುನರ್ವಸತಿ ನಿರ್ಮಾಣ ಕೇಂದ್ರಕ್ಕೆ ನಮ್ಮ ಫಲವತ್ತಾದ ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ, ಈ ಭೂಮಿಗಳು ಹೋದರೆ ನಾವು ಶಾಶ್ವತವಾಗಿ ಸಂತ್ರಸ್ತ ರಾಗುತ್ತೇವೆ. ನೆರೆ ಸಂತ್ರಸ್ತರಿಗೆ ಬೇರೆಡೆಗೆ ವ್ಯವಸ್ಥೆ  ಮಾಡುವಂತೆ ಅಧಿಕಾರಿಗಳಿಗೆ ಪಟ್ಟು ಹಿಡಿದಿದ್ದರು.


ಈ ವೇಳೆ ಇಲಾಖೆಯ ಆರ್ ಜಿ ರಾಠೋಡ, ಎ ಆರ್ ಖರೋಷಿ, ಪಿಎಸ್ಐ ಕುಮಾರ ಹಾಡಕರ ಸೇರಿದಂತೆ ಅನೇಕ ಪೋಲಿಸರು, ಇಲಾಖೆ ಅಧಿಕಾರಿಗಳು ಹಾಗೂ ಇತರ ರೈತರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು