11:44 AM Sunday22 - March 2026
ಬ್ರೇಕಿಂಗ್ ನ್ಯೂಸ್
ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್ ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ

ಇತ್ತೀಚಿನ ಸುದ್ದಿ

ಕೇಂದ್ರ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಕರಾಳ ದಿನ: ಮನೆ ಮನೆಯಲ್ಲಿ ಪ್ರತಿಭಟನೆ

26/05/2021, 19:32

ಮಂಗಳೂರು(reporterkarnataka news) : ಕೊರೊನ ಎರಡನೇ ಅಲೆಯು ದೇಶದಲ್ಲಿ ಅಪಾರ ಸಾವು- ನೋವುಗಳಿಗೆ ಕಾರಣವಾಗಿದೆ. ಕೊರೊನಾ ನಿಯಂತ್ರಿಸಿ ಲಸಿಕೆ ಹಂಚಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.

ಅವರು ಬುಧವಾರ (ಮೇ 26) ದೆಹಲಿ ರೈತರ ಹೋರಾಟಕ್ಕೆ 6 ತಿಂಗಳು ಮತ್ತು ರೈತ ವಿರೋಧಿ ಕೃಷಿ ಕಾನೂನು ವಾಪಾಸು ಪಡೆಯಲು ಮತ್ತು ಕೋವಿಡ್ ನಿಯಂತ್ರಿಸುವಲ್ಲಿ , ಜನರಿಗೆ ಪರಿಹಾರ ಕ್ರಮ ವಿತರಿಸುವಲ್ಲಿನ ವೈಫಲ್ಯದ ವಿರುದ್ದ  ರಾಷ್ಟ್ರ ವ್ಯಾಪಿ ಕರಾಳ ದಿನದ ಹೋರಾಟಕ್ಕೆ ಬೆಂಬಲಾರ್ಥವಾಗಿ ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆಗಳ ಕೇಂದ್ರ ಸಮಿತಿಗಳ ಕರೆಯನ್ವಯ ಬುಧವಾರ ರಾಷ್ಟ್ರವ್ಯಾಪಿ ಮನೆ ಮನೆ ಪ್ರತಿಭಟನೆಯನ್ನು ದಕ್ಷಿಣ‌ ಕನ್ನಡ ಜಿಲ್ಲಾದ್ಯಂತ ನಡೆಸಲಾಯಿತು.

ಕೇಂದ್ರ ರಾಜ್ಯ ಸರಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಹಳಿ ತಪ್ಪಿವೆ. ಸರಕಾರದ ಸಾಲು ಸಾಲು ವೈಫಲ್ಯಗಳು  ಘೋರವಾದ ಇತಿಹಾಸ ನಿರ್ಮಿಸುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ.  ಜನರ ನೆರವಿಗೆ ಬರಬೇಕಿದ್ದ ಸರಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.

ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆಯ  ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ಅಧೀನದಲ್ಲಿರುವ ಎಲ್ಲಾ ಘಟಕಗಳ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂದು ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು