ಇತ್ತೀಚಿನ ಸುದ್ದಿ
ಗಂಗೊಳ್ಳಿ; ಮೋಟಾರು ಸೈಕಲ್ ಕದಿಯುತ್ತಿದ್ದ ಅಂತರ್ಜಿಲ್ಲಾ ಯುವ ಕಳ್ಳರ ಬಂಧನ
02/10/2021, 11:05

ಬೈಂದೂರು(reporterkarnataka.com): ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಮೋಟಾರು ಸೈಕಲ್ ಕದಿಯುತ್ತಿದ್ದ ಕಳ್ಳರಿಬ್ಬರನ್ನು ಬೈಂದೂರು ಪೋಲಿಸರು ಬಂಧಿಸಿದ್ದಾರೆ.
ಫಕ್ರುದ್ದೀನ್(22) ಹಾಗೂ ಕಿರಣ ಶರಣಪ್ಪ ಕುಂಬಾರ (19) ಬಂಧಿತ ಆರೋಪಿಗಳು, ಇಬ್ಬರು ಆರೋಪಿಗಳು ನರಗುಂದ ಮೂಲದವರು ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲಾ ಎಸ್ಪಿ ಎನ್ ವಿಷ್ಣುವರ್ಧನರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಉಡುಪಿ ಜಿಲ್ಲೆ ಹಾಗೂ ಶ್ರೀಕಾಂತ ಕೆ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಕಾರ್ಯಾಚರಣೆ ನಡೆಸಿದ್ದರು