ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ದಟ್ಟ ಕಾಡಿನಲ್ಲಿ ಸುಟ್ಟ ಕಾರಿನಲ್ಲಿ ಕರಿಕಲಾದ ಮೃತದೇಹ ಪತ್ತೆ; ಕೊಲೆಯೇ ? ಆತ್ಮಹತ್ಯೆಯೇ? ಅಲ್ಲ, ಆಕಸ್ಮಿಕವೇ?
28/09/2021, 23:26

ತೀರ್ಥಹಳ್ಳಿ (reporterkarnataka.com): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಟ್ಲುಗೋಡು ಸಮೀಪದ ದಟ್ಟ ಅರಣ್ಯದಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಕಾರಿನಲ್ಲಿ ಇದೀಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸೌದೆ ತರಲು ಹೋಗಿದ್ದ ಸ್ಥಳೀಯರು ಸುಟ್ಟ ಕಾರು ಗಮನಿಸಿ ಸ್ಥಳಕ್ಕೆ ತೆರಳಿದ್ದಾರೆ.ಆಗ ಕಾರಿನಲ್ಲಿ ಮೃತದೇಹ ಕೂಡ ಪತ್ತೆಯಾಗಿದೆ ಎನ್ನಲಾಗಿದೆ.
ಸುಟ್ಟಿರುವ ಕಾರು ಸಾಗರ ತಾಲ್ಲೂಕಿನ ಆನಂದಪುರದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎಂಬ ಮಾಹಿತಿ ತಿಳಿಯಲಾಗಿದೆ. ಘಟನೆ ಆಕಸ್ಮಿಕವೊ, ಆತ್ಮಹತ್ಯೆ ಅಥವಾ ಕೊಲೆಯೋ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.