4:18 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ದುಸ್ಥಿತಿಯಲ್ಲಿ ಮಾವಿನ ಕಟ್ಟೆ-  ಕುಂಟಲ ರಸ್ತೆ: ನಡೆದಾಡಲೂ ಅಸಾಧ್ಯ, ವಾಹನವೇರಲೂ ಕಷ್ಟಸಾಧ್ಯ: ತಕ್ಷಣ ದುರಸ್ತಿಪಡಿಸದಿದ್ದರೆ ಭಾರಿ ಹೋರಾಟದ ಎಚ್ಚರಿಕೆ

28/09/2021, 18:37

ಮೂಡಬಿದ್ರೆ(reporterkarnataka.com): ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಬಿದಿರೆ-  ಶಿರ್ತಾಡಿ ಮಾರ್ಗದ ಮಾವಿನ ಕಟ್ಟೆ(ಕುಕ್ಕುದ ಕಟ್ಟೆ) ಎಂಬಲ್ಲಿಂದ ಕವಲೊಡೆದು ಕುಂಟಲ ಎಂಬ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರವೂ ಸೇರಿದಂತೆ ನಡೆದಾಡಲೂ ಅಸಾಧ್ಯವಾಗಿರುವ ಸ್ಥಿತಿಯಲ್ಲಿದ್ದು, ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಉಪಸ್ಥಿತರಿದ್ದ 5ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರವಾಗಿ ಮಾಧ್ಯಮ ಜತೆ ಮಾತನಾಡಿದ ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಶ್ರೀ ನಿಡ್ಡೋಡಿ ಈ ವಿಷಯ ತಿಳಿಸಿದರು.

ರಸ್ತೆಯು ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಸುಮಾರು 25 ಕುಟುಂಬಗಳು ನಿತ್ಯ ಪ್ರಯೋಜನ ಪಡೆಯುವ ರಸ್ತೆ ಇದಾಗಿದೆ. ಪ್ರತಿನಿತ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮಹಿಳೆಯರು ಶಾಲಾ -ಕಾಲೇಜು, ನೌಕರಿ, ಆಸ್ಪತ್ರೆ ಹಾಗೂ ದಿನನಿತ್ಯದ ಇನ್ನಿತರ ಕೆಲಸ ಕಾರ್ಯಗಳಿಗೆ ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಸಮರ್ಪಕ ದಾರಿದೀಪದ ವ್ಯವಸ್ಥೆಯೂ ಇಲ್ಲದೆ, ರಸ್ತೆ ನಿರ್ವಹಣೆಯೂ ಇಲ್ಲದೆ ಗದ್ದೆಯಂತಾಗಿದೆ. ಈ ರಸ್ತೆಯಲ್ಲಿ ವಾಹನ ಅಥವಾ ನಡೆದುಕೊಂಡು ಹೋಗುವುದು ಅಸಾಧ್ಯವೆನಿಸಿದೆ. ರಸ್ತೆ ಅನೇಕ ರೀತಿಯ ತೊಂದರೆಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಭಿವೃದ್ಧಿ ಯೋಜನೆಗಳು ಜನರಿಗೆ ಪೂರಕ 

ಆಗಿರಬೇಕು. ಅದು ಕಡತ ಅಥವಾ ಭರವಸೆ ರೂಪದಲ್ಲಿದ್ದರೆ ಸಾಲದು ಕಾರ್ಯಗತವಾಗಬೇಕು ಎಂಬ ನೀತಿ ಪಾಠವನ್ನು ಆಡಳಿತ ನಡೆಸುವರು ಅರಿತುಕೊಳ್ಳಬೇಕು ಎಂದು ಅವರು ನುಡಿದರು.

ಸುಮಾರು 20 ಮನೆಗಳ 150ಕ್ಕೂ ಅಧಿಕ ಮಂದಿಗೆ ಪ್ರಯೋಜನವಾಗಬೇಕಾಗಿದ್ದ ರಸ್ತೆಯಲ್ಲಿ ಸಂಚರಿಸುವುದು ದೊಡ್ಡ ಸವಾಲಾಗಿದೆ.

ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ಅವರು ಆಗ್ರಹಿಸಿದರು.

ಮುಂದಿನ ಕೆಲವು ದಿನಗಳ ಒಳಗೆ  ರಸ್ತೆ ಅಭಿವೃದ್ಧಿಯಾಗಿ ಮಕ್ಕಳು, ಹೆಂಗಳೆಯರು, ಹಿರಿಯರು ಸರಾಗವಾಗಿ ಓಡಾಡಲು ಉತ್ತಮ ರಸ್ತೆ ನಿರ್ಮಿಸಬೇಕು. ಇಲ್ಲದೆ ಇದ್ದಲ್ಲಿ ಪಂಚಾಯಿತಿ ಮುಂದೆ ಧರಣಿ ಅಥವಾ ನ್ಯಾಯಾಂಗದ ಮೊರೆ ಹೋಗುವುದು ಅನಿವಾರ್ಯ, ಅಲ್ಲದೆ ಈ ವಿಚಾರವನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ವರೆಗೂ ತಲುಪಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ ಧನುಷ್ ಪಿ, ಹತ್ತನೇ ತರಗತಿಯ ನಿಶಾ ಎಂ, ದ್ವಿತೀಯ ಪಿಯು ವಿದ್ಯಾರ್ಥಿನಿ ಸುಶ್ಮಿತಾ, ಆರನೇ ತರಗತಿಯ ಹರ್ಷಿತ್ ಹಾಗೂ ಎಂಟನೇ ತರಗತಿಯ ನಿರೀಕ್ಷಾ ಪಾಲ್ಗೊಂಡಿದ್ದರು.

ಇದಕ್ಕೆ ಮುನ್ನ ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಶ್ರೀ ನಿಡ್ಡೋಡಿ ಸ್ಥಳ ಪರಿಶೀಲನೆ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು