4:20 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಮಸ್ಕಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಗೋವುಗಳ ಮಾರಣ ಹೋಮ: ಪುರಸಭೆ ಮುಖ್ಯಾಧಿಕಾರಿಗಳು ಘೋರ ಮೌನ

28/09/2021, 09:20

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮಸ್ಕಿ ತಾಲೂಕು ಕೇಂದ್ರದಲ್ಲಿ ವಾಹನ ಚಾಲಕರ ನಿರ್ಲಕ್ಷ ಹಾಗೂ ಜಾನುವಾರು ಮಾಲೀಕರ ಉಡಾಫೆತನದಿಂದ ಗೋವುಗಳನ್ನು ಸಾವು ಜಾಸ್ತಿಯಾಗುತ್ತಿದ್ದು, ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಮಸ್ಕಿ ಪಟ್ಟಣದ ರಸ್ತೆ ದುರಂತಗಳಲ್ಲಿ ಗೋವುಗಳ ಸಾವು ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ  ಹಿಂದೂ ಮುಖಂಡ ರಾಕೇಶ್ ಪಾಟೀಲ್, ಹೆತ್ತ ತಾಯಿಯು ಒಂದೇ ಗೋತಾಯಿಯೂ ಒಂದೇ. ಚಿಕ್ಕವರಿದ್ದಾಗ ತಾಯಿಯ ಎದೆ ಹಾಲನ್ನು ಕುಡಿದಿದ್ದೇವೆ.
ಸಾಯುವವರೆಗೂ ಗೋಮಾತೆಯ ಹಾಲನ್ನು ಕುಡಿಯುತ್ತೇವೆ. ಹಾಗಾಗಿ ಇಬ್ಬರು ನಮಗೆ ದೇವರ ಸಮಾನ. ಅಂತಹ ಕೋಟ್ಯಾನುಕೋಟಿ ದೇವತೆಗಳನ್ನು ಹೊಂದಿರುವ ಗೋ ತಾಯಿಯ ಈ ಪರಿಸ್ಥಿತಿಯನ್ನು ನಮಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಇದಕ್ಕೆ  ಸೂಕ್ತ ಪರಿಹಾರ ನೀಡುವಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿಫಲರಾಗಿದ್ದಾರೆ. ಗೋವುಗಳ ಸಾವಿಗೆ ತಕ್ಷಣವೆ ಕ್ರಮ ತೆಗೆದುಕೊಳ್ಳದಿದ್ದರೆ ಪುರಸಭೆ ಕಚೇರಿಗೆ  ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆದರೆ ಮುಖ್ಯಧಿಕಾರಿ ಹನುಮಂತಮ್ಮ ನಾಯಕ್ ಯಾವುದೇ ಕಾರ್ಯ ಇನ್ನುವರೆಗೂ ಮಾಡಿಲ್ಲ ಇದಕ್ಕೆ ಸಂಬಂಧಪಟ್ಟ ಬಿಡಾಡಿ ದನಗಳ ಮಾರಣಹೋಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ರಾಕೇಶ್ ಅವುಗಳನ್ನು ಸಂಸ್ಕಾರ ಮಾಡಿ ಮಾನವತೆ ಮೆರೆದಿದ್ದಾರೆ. ಮಸ್ಕಿ ಹಳ್ಳದ ಸೇತುವೆ ಮೇಲೆ ಹೆದ್ದಾರಿ ಬಸ್ಸುಗಳು ಜನಗಳ ಮೇಲೆ ಎಷ್ಟೋ ಬಾರಿ ಹೊಡೆದುಕೊಂಡು ಹೋಗಿದ್ದಾರೆ.  ಇಂತಿಷ್ಟು ಪುರಸಭೆ ಅಧಿಕಾರಿಗಳಿಗೆ ಕಾಳಜಿ ಇಲ್ಲ. ದಿನದಿಂದ ದಿನಕ್ಕೆ ಸಾಯುತ್ತಿರುವ ದನಗಳಿಗೆ ಹೊಣೆ ಯಾರು ಎಂಬಂತೆ ಗೋಮಾತೆ ದೇವರಿಗೆ ಸಮಾನ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗೋಶಾಲೆಗೆ ದನಗಳನ್ನು ಒಪ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಹೋರಾಟ ಮಾಡುವುದಾಗಿ ಯುವ ಮುಖಂಡ ರಾಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು