ಇತ್ತೀಚಿನ ಸುದ್ದಿ
ಸುಲ್ತಾನ್ ಬತ್ತೇರಿ-ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಹೊಸ ಸರಕಾರಿ ಸಿಟಿ ಬಸ್ ಸೇವೆ ಸೆ.27ರಂದು ಆರಂಭ
27/09/2021, 10:14
ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತ ವಿದ್ಯಾಲಯದ ಮೂಲಕವಾಗಿ ಕಂಕನಾಡಿ ರೈಲು ನಿಲ್ದಾಣದವರೆಗೆ ಮತ್ತು ಅಲ್ಲಿಂದ ಬೋಳೂರು ಸುಲ್ತಾನ್ ಬತ್ತೇರಿಯವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ಸೆ.27ರಿಂದ ಆರಂಭಿಸಲಿದೆ.
ಬೋಳೂರು ಅಮೃತ ವಿದ್ಯಾಲಯ ಮೈದಾನದಲ್ಲಿ
ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಬೆಳಿಗ್ಗೆ 10.30ಕ್ಕೆ ಚಾಲನೆ ನೀಡುವರು. ಸೆ. 27 ಮಾತಾ ಅಮೃತಾನಂದಮಯಿ ಅವರ 68ನೇ ಜನ್ಮದಿನವೂ ಆಗಿದ್ದು, ವಿಶ್ವ ಪ್ರವಾಸೋದ್ಯಮ ದಿನ ಕೂಡ ಆಗಿರುವುದು ವಿಶೇಷ.