7:30 PM Friday23 - October 2026
ಬ್ರೇಕಿಂಗ್ ನ್ಯೂಸ್
ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ವೇಣೂರಿನ ಹವಿಶ್ ಕುಮಾರ್ ಜೆ. ಹಾಗೂ ಆತ್ಮಿ ಪ್ರಕಾಶ್ ಅಜೆಕಾರು ಆಯ್ಕೆ

23/10/2026, 19:27

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ವೇಣೂರಿನ ಹವಿಶ್ ಕುಮಾರ್ ಜೆ. ಹಾಗೂ ಆತ್ಮಿ ಪ್ರಕಾಶ್ ಅಜೆಕಾರು ಆಯ್ಕೆಯಾಗಿದ್ದಾರೆ.


ವೇಣೂರು ಮೆಸ್ಕಾಂ ಜೆಇ ಗಣೇಶ್ ನಾಯ್ಕ್ ಹಾಗೂ ಆಶಾ ದಂಪತಿಯ ಪುತ್ರನಾದ ಹವಿಶ್ ಪ್ರಸ್ತುತ ವೇಣೂರಿನ ಬ್ರೈಟ್ ಹೊರೈಝೋನ್ ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಬಾಲ್ಯದಿಂದಲೇ ಕಲೆಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಹವಿಶ್ ನೃತ್ಯ , ಸಂಗೀತ, ಅಭಿನಯ ಗೀತೆ, ಭಗವತ್ ಗೀತೆ ಕಲಿಕೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಯನ್ನು ಅನಾವರಣ ಗೊಳಿಸಿದ್ದಾನೆ.
ಪ್ರಸ್ತುತ ವೇಣೂರಿನ ಲಾವಣ್ಯ ಜಗದೀಶ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಾಯಲಿ ನ್ ತರಬೇತಿಯನ್ನು ಪಡೆಯುತ್ತಿದ್ದು, ಈತನು ಪದ್ಮಶ್ರೀ ಭಟ್ ಸಾರಥ್ಯದ ವಾಯ್ಸ್ ಆಫ್ ಆರಾಧನ ತಂಡಕ್ಕೆ ಆಗಸ್ಟ್ ತಿಂಗಳಲ್ಲಿ ಸೇರ್ಪಡೆ ಕೊಂಡಿದ್ದಾನೆ. ಸೇರಿದ ಒಂದೇ ತಿಂಗಳಲ್ಲಿ ತನ್ನ ಪ್ರತಿಭೆಯ ಮೂಲಕ ಸೆಪ್ಟೆಂಬರ್ ತಿಂಗಳ ವಿಜೇತನಾಗಿದ್ದಾನೆ.
ಪ್ರಕಾಶ್ ಅಜೆಕಾರು ಹಾಗೂ
ಧೃತಿ ಪ್ರಕಾಶ್ ದಂಪತಿಯ ಪುತ್ರಿಯಾದ ಆತ್ಮಿ ಪ್ರಕಾಶ್ ಅಜೆಕಾರ್ ಪ್ರಸ್ತುತ ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೊಟ್ಟು ಹೊಸ್ಮಾರು ಇಲ್ಲಿ 2ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂಗೀತ, ಭರತನಾಟ್ಯ ಅಭಿನಯ ಗೀತೆ, ಪಾಶ್ಚಾತ್ಯ ನೃತ್ಯ ಇವೆಲ್ಲ ಕಲೆಯಲ್ಲಿ ತೊಡಗಿಸಿಕೊಂಡಿದ್ದಾಳೆ. .
ತನ್ನ 1ನೇ ವರ್ಷದಿಂದ ಕೃಷ್ಣ ವೇಷದ ಮೂಲಕ ವೇದಿಕೆ ಹತ್ತಿದ ಈಕೆ ಈಗಾಗಲೇ ಕರ್ನಾಟಕದ ಅನೇಕ ಕಡೆಗಳಲ್ಲಿ ಕಟೀಲು, ಕೊಲ್ಲೂರು, ಉಡುಪಿ, ಮಂಗಳೂರು, ಕಾರ್ಕಳ, ಮೂಡಬಿದ್ರಿ,ಉಜಿರೆ ಮತ್ತು ಕೇರಳ ಹೀಗೆ 25ಕ್ಕಿಂತಲೂ ಅಧಿಕ ವೇದಿಕೆಯಲ್ಲಿ ತನ್ನ ನೃತ್ಯ, ಹಾಡುಗರಿಕೆ, ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿ ಹಲವಾರು ವೇದಿಕೆಯಲ್ಲಿ ಪ್ರಶಂಸನ ಪತ್ರ ಸ್ಮರಣಿಕೆ ಗಳನ್ನು ಪಡೆದಿದ್ದಾಳೆ. ಕಲೆಯ ಜೊತೆಗೆ ಓದಿನಲ್ಲೂ ಜಾಣೆ. ಮಂಗಳೂರಿನ ಖಾಸಗಿ ಚಾನೆಲ್ ನಲ್ಲಿ ಅನೇಕ ಬಾರಿ ಕಾರ್ಯಕ್ರಮ ನೀಡಿದ್ದಾಳೆ. ರಾಜ್ಯಮಟ್ಟದ ಮಕ್ಕಳಹಬ್ಬದಲ್ಲಿ ಕಾರ್ಯಕ್ರಮ ನೀಡಿ ಪ್ರಶಂಸನಾ ಪತ್ರ ಪಡೆದಿದ್ದಾಳೆ. ರೇಡಿಯೋ ಸಾರಂಗ್ 107.8 ಮಕ್ಕಳಿಗಾಗಿ ಸಾರಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ETV bhal bharath channel nadesida quiz ಅಲ್ಲಿ ಬಹುಮಾನ ಪಡೆದಿರುತ್ತಾಳೆ. ಈಕೆ ಕಲಾರಾಧನೆ ತಂಡದ ಸಕ್ರಿಯ ಸದಸ್ಯೆ. ಮೂಡಬಿದ್ರೆಯ agari enterprises ಅವರಿಂದ ಇವಳ ಕಲೆಯನ್ನು ಗುರುತಿಸಿ ಗೌರವಿಸಿದ್ದಾರೆ ಹಾಗೂ
Lions international lions club central karkala ಇವರ ವತಿಯಿಂದ ಸನ್ಮಾನ ಪಡೆದುಕೊಂಡಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು