ಇತ್ತೀಚಿನ ಸುದ್ದಿ
ಕನ್ನಡ ಭಾಷೆ ಬಲ್ಲವರನ್ನೇ ಬ್ಯಾಂಕ್ ಗಳಲ್ಲಿ ನೇಮಿಸಿ: ಕೂಡ್ಲಗಿಯಲ್ಲಿ ಕರವೇ ಆಗ್ರಹ; ಹಿಂದಿ ಹೇರಿಕೆಗೆ ಖಂಡನೆ
18/09/2021, 09:21
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಎಲ್ಲ ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತಹ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಒತ್ತಾಯಿಸಿ ಹಾಗೂ ಹಿಂದಿ ಭಾಷೆಯನ್ನು ಖಡ್ಡಾಯವಾಗಿಸಿ ಹೊರೆಯಾಗಿಸಿ ಹೇರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕೂಡ್ಲಿಗಿ ಪಟ್ಟಣದ ಬ್ಯಾಂಕ್ ಶಾಖೆಗಳ ಮುಂದೆ ಘಟಕದಿಂದ ಪ್ರತಿಭಟಿಸಿ ಹಕ್ಕೊತ್ತಾಯ ಮಾಡಲಾಯಿತು.
ಬ್ಯಾಂಕುಗಳಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಭಾಷಾ ಹೇರಿಕೆ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಆಗ್ರಹಿಸಿತು. ಕರವೇ ಮುಖಂಡರು ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ್ಲಿಗಿ ಶಾಖೆಯ ಮುಂದೆ ಪ್ರತಿಭಟಿಸಿ ಮಾತನಾಡಿ, ಭಾರತ್ ಒಕ್ಕೂಟ ಸರ್ಕಾರವು ಪ್ರತಿವವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಎಂದು ಆಚರಣೆ ಮಾಡುತ್ತಿದ್ದು, ಅದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಸತತ ಇಪ್ಪತ್ತು ವರ್ಷಗಳಿಂದ,”ಹಿಂದಿ ದಿವಸ್” ನ್ನು ವಿರೋಧಿಸಿ ಖಂಡಿಸುತ್ತಿದೆ. ಹಿಂದಿ ಭಾಷೆಗೆ ಅನಗತ್ಯ ಮಹತ್ವ ನೀಡಿ ಅನ್ಯ ಭಾಷೆಗಳನ್ನು ಕಡೆಗಣಿಸಲಾಗುತ್ತಿದ್ದು, ಕನ್ನಡಿಗರ ತೆರಿಗೆ ಹಣದಲ್ಲಿ “ಹಿಂದಿ ದಿವಸ್” ಆಚರಣೆಯನ್ನು ಆಚರಿಸುತ್ತಿರುವುದನ್ನು ವಿರೋಧಿಸುತ್ತೇವೆ ಎಂದರು.
ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ವ್ಯವಹಾರ ಭಾಷೆಗೆ ಪ್ರಾಧನ್ಯತೆ ನೀಡಬೇಕು, ಬ್ಯಾಂಕ್ ಸಿಬ್ಬಂದಿ ಹಿಂದಿ ಭಾಷೆಯನ್ನು ಗ್ರಾಹಕರ ಮೇಲೆ ಹೇರುವುದು ಖಂಡನೀಯ ಎಂದು ಅವರು ಆಕ್ರೊಶ ವ್ಯಕ್ತಪಡಸಿದರು.
ಕರವೇ ಬೇಡಿಕೆ: ಬ್ಯಾಂಕುಗಳಲ್ಲಿ ಎಲ್ಲ ವ್ಯವಹಾರ ಮತ್ತು ಸೇವೆಗಳು ಕನ್ನಡದಲ್ಲಿರಬೇಕು. ಬೇರೆ ರಾಜ್ಯದ ಉದ್ಯೋಗಿಗಳನ್ನು ಅವರವರ ರಾಜ್ಯಕ್ಕೆ ವರ್ಗಾಯಿಸಿ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡಿಗರನ್ನೇ ನೇಮಿಸಬೇಕು, ಚಲನ್, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲಾ ಅರ್ಜಿನಮೂನೆಗಳು ಕನ್ನಡದಲ್ಲಿರಬೇಕು, ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಕ್ವಾಡ ಎಂಬಿತ್ಯಾದಿ ಭಾಷಾ ಒಕ್ಕೂಟದ ವಿರೋಧಿ ಆಚರಣೆ ಕೂಡಲೇ ನಿಲ್ಲಬೇಕು, ಬ್ಯಾಂಕಿನ ನಾಮಫಲಕ ಮತ್ತು ಸೂಚನಾ ಫಲಕದಲ್ಲಿ ಶೇ. 60ರಷ್ಟು ಭಾಗ ಕನ್ನಡ ಭಾಷೆಯನ್ನೇ ಬಳಸಬೇಕು ಎಂಬ ಹಕ್ಕೊತ್ತಾಯದ ಪತ್ರವನ್ನು ಕೂಡ್ಲಿಗಿ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕರ್ನಾಟಕ ರಕ್ಷಣಾವೇದಿಕೆ ಸಲ್ಲಿಸಿತು. ಇದರಂತೆ ಪಟ್ಟಣದ ವಿವಿದ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರಿಗೂ ಕರವೇಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕೂಡ್ಲಿಗಿ ಪ. ಪಂ ಸದಸ್ಯಸೈಯದ್ ಶುಕೂರ್, ಸಾಲುಮನಿ ರಾಘವೇಂದ್ರ,ಮೊರಬದ ವೀರಭದ್ರಪ್ಪ, ಹೆಗ್ಡಾಳ್ ಶಿವು, ಮಹೇಶ, ಬ್ಯಾಳಿ ತಿಪ್ಪೇಸ್ವಾಮಿ ಹಾಗೂ ಚಂದ್ರು,ಅಬ್ದುಲ್ಲಾ, ದೊಡ್ಡ ಶೇಷಪ್ಪ, ದೊಡ್ಡಟ್ಟಿ ನಾಗಪ್ಪ, ಚಂದ್ರಪ್ಪ, ಸೇರಿದಂತೆ ಮತ್ತಿತರರು ಇದ್ದರು.