7:25 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವಿಶ್ವಕರ್ಮ ಸಮಾಜವು ಸಂಘಟನಾತ್ಮಕವಾಗಿ ಒಗ್ಗೂಡಲು ಆದ್ಯತೆ ಕೊಡಿ: ಕೃಷ್ಣಚಾರ್

18/09/2021, 08:51

ವಿಶ್ವಕರ್ಮ ಸಮಾಜವು ಸಂಘಟನಾತ್ಮಕವಾಗಿ ಒಗ್ಗೂಡಲು ಆದ್ಯತೆ ಕೊಡಿ: ಕೃಷ್ಣಚಾರ್

info.reporterkarnataka@gmail.com

ವಿಶ್ವಕರ್ಮ ಸಮುದಾಯವು ಸಂಘಟನಾತ್ಮಕವಾಗಿ ಬೆಳೆಯಲು ಹಾಗೂ ನಮ್ಮ ಸಮುದಾಯವನ್ನು ಗುರುತಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಒಗ್ಗಟ್ಟಿನ ಅಗತ್ಯವಿದೆ. ಒಗ್ಗಟ್ಟು ಇದ್ದರೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವೆಂದು ನಾಗಮಂಗಲ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಕೃಷ್ಣಚಾರ್ ಹೇಳಿದರು.

ಅವರು ನಾಗಮಂಗಲ ತಾಲೂಕು ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇವಲ ಕುಸುರಿ ಕೆಲಸವಷ್ಟೇ ಅಲ್ಲದೆ ತಮ್ಮಗಳ ಹಾಗೂ ಸಮುದಾಯದ ಚಿಂತನಾಶಕ್ತಿ ಮೈಗೂಡಿಸಿಕೊಳ್ಳಬೇಕು. ನಮ್ಮ ಸಮುದಾಯದ ನಾಯಕರುಗಳು ಜಯಂತೋತ್ಸವ ಆಚರಣೆ ಮಾಡಲು ಸತತ ಪ್ರಯತ್ನ ದೊಂದಿಗೆ ಇಂದು ರಾಜ್ಯಾದ್ಯಂತ ಆಚರಣೆ ಮಾಡುತ್ತಿದ್ದು ಇಂತಹ ಶಕ್ತಿ ಹಾಗೂ ಸಮುದಾಯದ ಬೆಳವಣಿಗೆಯನ್ನು ಕೊಂಡೊಯ್ಯಲು ನಾವುಗಳು ಒಗ್ಗಟ್ಟಿನ ಶಕ್ತಿ ಅಗತ್ಯತೆ ಎಂದು ತಿಳಿಸಿದರು.

ನಮ್ಮ ಸಮುದಾಯದ ಪರಂಪರೆಯನ್ನು ನಮ್ಮ ಮಕ್ಕಳು ನಮಗೆ ಸೀಮಿತವಾಗಿರದೆ ಒಟ್ಟಿಗೆ  ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಮುಖಾಂತರ ಬದುಕಿಗೆ ವೃತ್ತಿ ಜೀವನಕ್ಕೆ ವಿದ್ಯೆ ಎರಡನ್ನು ನಾವುಗಳು ಕೊಂಡೊಯ್ಯುವ ಮುಖಾಂತರ ನಮ್ಮ ಸಮುದಾಯದ ಏಳಿಗೆಗೆ ವಿಶ್ವಕರ್ಮ ಪರಂಪರೆಗೆ ನಮ್ಮಗಳ ಸೇವೆ ಅನನ್ಯವಾಗಿದೆ ಎಂದರು.

ಇದೇ ವೇಳೆ ತಾಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಗುರುವಿಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಉಪ ತಹಸಿಲ್ದಾರಾದ ಭಾಗ್ಯಮ್ಮ ಹಾಗೂ ಇಲಾಖಾಧಿಕಾರಿಗಳು ಹಾಗೂ ವಿಶ್ವಕರ್ಮ ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು