ಇತ್ತೀಚಿನ ಸುದ್ದಿ
ಮಸ್ಕಿ; ಪೇಟೆ ಮಂದಿ ಮುಂದು, ಗ್ರಾಮೀಣ ಜನ ಲಸಿಕೆ ಹಾಕಿಸಿಕೊಳ್ಳುವುದರಲ್ಲಿ ಸ್ವಲ್ಪ ಹಿಂದೇಟು
18/09/2021, 07:38
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಕ್ಷೇತ್ರದ ನೂರಕ್ಕೆ ನೂರರಷ್ಟು ಲಸಿಕೆ ಗುರಿ ಮುಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿ ಮಸ್ಕಿ ಆರೋಗ್ಯ ಕೇಂದ್ರದಲ್ಲಿ 90 ಲಸಿಕೆ ಗುರಿ ಮುಟ್ಟಿದೆ.
ಬೆಳಗಿನಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಸಾಲಾಗಿ ಬಂದು ನಿಲ್ಲುವ ದೃಶ್ಯ ಕಂಡುಬಂದಿದೆ. ಆದರೆ ಗ್ರಾಮೀಣ ಜನರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದು ಸಾರ್ವಜನಿಕ ಇನ್ನು ಭಯ ಹೋಗಿಲ್ಲವೆಂದು ಧ್ವನಿ ಕೇಳಿಬರುತ್ತಿದೆ. ಅಲ್ಲದೆ ಮೆದಿಕಿನಾಳ, ಬಪ್ಪೂರ್, ಅಂಕುಷದೊಡ್ಡಿ, ಸಂತೆಕೆಲ್ಲೂರು,
ಗುಡದೂರು, ಹಾಲಾಪುರ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಕಂಡು ಬಂದಿತು. ಶೇಕಡ ನೂರಕ್ಕೆ 90ರಷ್ಟು ಯಶಸ್ವಿ ಕಾರ್ಯ ನಡೆಯಿತು.