ಇತ್ತೀಚಿನ ಸುದ್ದಿ
ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ
03/04/2026, 13:19
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆಯಲ್ಲಿ ಇಂದು ಗುರುವಾರ ಹನುಮ ಜಯಂತಿ ಅಂಗವಾಗಿ ಬೃಹತ್ ಆಕರ್ಷಕ ಮೆರವಣಿಗೆ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಹಿಂದುಗಳು, ಕೇಸರಿ ಶಾಲು ತೊಟ್ಟು, ಮಾರ್ಗದ ಉದ್ದಕ್ಕೂ ಕೇಸರಿ ಬಾವುಟಗಳನ್ನು ಹಿಡಿದುಕೊಂಡು, ಶೋಭಾ ಯಾತ್ರೆ ಯಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ಚಂಡೆ ಮದ್ದಳೆ, ಕೊಡಗಿನ ಸಾಂಪ್ರದಾಯ ನೃತ್ಯಗಳು, ಬುಡಕಟ್ಟು ಜನರ ನೃತ್ಯಗಳು, ಹನುಮಾನ ಆಕರ್ಷಕ ಮಂಟಪಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಆಕರ್ಷಣೆಗೆ ಒಳಗಾಗಿತ್ತು.


ಡಿಜೆಸೌಂಡ್ಸ್ ಧ್ವನಿಗೆ ಹಲವರು ಮಾರ್ಗದುದ್ದಕ್ಕೂ
ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಶಿಸ್ತುಬದ್ಧವಾಗಿ ಆಕರ್ಷಕವಾಗಿ ನಡೆದ ಹನುಮ ಜಯಂತಿ ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ತೆಲುಗರ ಬೀದಿಯಿಂದ ಆರಂಭಗೊಂಡ ಮೆರವಣಿಗೆ ಸಂಜೆ ತಾಲೂಕು ಮೈದಾನದವರೆಗೆ ಸಾಗಿ ಸಮಾವೇಶಗೊಂಡಿತು.












