4:00 AM Thursday17 - September 2026
ಬ್ರೇಕಿಂಗ್ ನ್ಯೂಸ್
ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ

31/03/2026, 20:15

ಬಾಗಲಕೋಟೆ(reporterkarnataka.com): ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ. ಆಗ ಕಳ್ಳ ಮತಗಳಿಂದ ನನ್ನ ವಿರುದ್ಧ ಗೆದ್ದಿದ್ದರು ಎಂದು ಶ್ರೀರಾಮುಲು ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಐದು ದಿನ ಬಿಡಿ, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಇಲ್ಲಿಯೇ ಇದ್ದರು. ಎಂಎಲ್ಎ ಆಗಿ ನಮ್ಮ ಭಾಗದಲ್ಲಿ ಗೆದ್ದಿದ್ದರು. ನನ್ನ ವಿರುದ್ಧವೇ 1600 ವೋಟ್ ಗಳಿಂದ ಗೆದ್ದಿದ್ದರು. ಆ 1600 ವೋಟ್ ಗಳು ಕಳ್ಳ ವೋಟ್ ಗಳಾಗಿದ್ದವು.
ಯಾಕಂದ್ರೆ ಸಿ.ಎಂ.ಇಬ್ರಾಹಿಂ, ಪಾಟೀಲ್ ಸಾಹೇಬ್ರುಗಳು ಉಸ್ತುವಾರಿಯಾಗಿದ್ದರು. ಅವರು ಏನು ಹೇಳಿದ್ದರು ನೆನಪಿಸಿಕೊಳ್ಳಿ. ಹತ್ತಿರತ್ತಿರ 2 ಸಾವಿರ ವೋಟ್ ಗಳನ್ನು ಖರೀದಿ ಮಾಡಿ, ಗೆದ್ದಿದ್ದೀವಿ ಅಂದಿದ್ದರು. ಬಹುಶಃ ಅಂದು ಸಿದ್ದರಾಮಯ್ಯ ಸಾಹೇಬರ ಗೆಲುವು ಅಂತಾನೇ ಅರ್ಥ ಎಂದಿದ್ದಾರೆ. ಈ ಸಲ ನಾವೂ ಬಿಜೆಪಿಯಲ್ಲಿ ಚರಂತಿಮಠ ಅವರನ್ನು ಗೆಲ್ಲಿಸಬೇಕು ಎಂಬ ವಿಚಾರದಲ್ಲಿ ಎಲ್ಲರೂ ಎಫರ್ಟ್ ಹಾಕ್ತಾ ಇದ್ದೇವೆ. ಚರಂತಿಮಠ್ ಅವರು ಕೂಡ ಬಹಳಷ್ಟು ಒಳ್ಳೊಳ್ಳೆ ಕೆಲಸಗಳನ್ನ ಮಾಡಿದ್ದಾರೆ. 2023ರಲ್ಲಿ ಸೋತಿರಬಹುದು. ಜನರಲ್ಲಿ ಭಾವನೆ ಮೂಡಬಹುದು. ಎರಡೂವರೆ ವರ್ಷಗಳಾಯ್ತಪ್ಪ. ಆದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಕೇವಲ ಬೇರೆ ಬೇರೆ ಕಾರಣಗಳಿಂದ ಅವರು ಏನು ಮಾಡೋದಕ್ಕೆ ಆಗಿಲ್ಲ. ಈ ಸಲ ಭಾರತೀಯ ಜನತಾ ಪಾರ್ಟಿಯನ್ನು ಕೈ ಹಿಡಿಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು