10:11 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೊರೊನಾ ಲಾಕ್ ಡೌನ್ ಗೆ ಸ್ಥಗಿತಗೊಂಡು ಬಸ್ ಮತ್ತೆ ಬರಲೇ ಇಲ್ಲ!: ಬಿ.ಬಿ.ತಾಂಡಕ್ಕೆ ಸಾರ್ವಜನಿಕ ಸಾರಿಗೆಗೆ ರೈತರ ಆಗ್ರಹ

11/09/2021, 10:40

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೇಬಸಾಪುರ ತಾಂಡಕ್ಕೆ ಬಸ್ ಸಂಚಾರ ಸೇವೆಯನ್ನು ಕಲ್ಪಿಸುವಂತೆ ರೈತ ಮುಖಂಡರ ನೇತೃತ್ವದಲ್ಲಿ ಗ್ರ‍ಾಮಸ್ಥರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಆಗ್ರಹಿಸಿದ್ದಾರೆ. 

ಅವರು ಕೂಡ್ಲಿಗಿ ಘಟಕದ ಅಧಿಕಾರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ.

ಬಂಡೇ ಬಸಾಪುರ ತಾಂಡ ತಾಲೂಕು ಕೇಂದ್ರದಿಂದ ಸುಮಾರು 5 ಕಿಮೀ ದೂರದಲ್ಲಿದೆ. ಕೋವಿಡ್ ಸಂದರ್ಭ ಹೊರತುಪಡಿಸಿದಂತೆ ಬಸ್ ಸಂಪರ್ಕ ಗ್ರಾಮಕ್ಕೆ ಈವರೆಗೂ ಇತ್ತು, ಕೋವಿಡ್ ಲ‍ಾಕ್ ಡೌನ್ ನಿಂದಾಗಿ ರದ್ದಾಗಿದೆ. ನಂತರದ ದಿನಗಳಲ್ಲಿ ಮತ್ತೆ ಬಸ್ ಕಲ್ಪಿಸಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಮಕ್ಕಳು ಹಾಗೂ ಗರ್ಭಿಣಿಯರಿಗೆ, ರೈತರು ಮತ್ತು ಅನಾರೋಗ್ಯಕ್ಕೆ ತುತ್ತಾದವರಿಗೆ ಬಸ್ ಸೌಲಭ್ಯ ಅನಿವಾರ್ಯವಾಗಿದೆ. ಕಾರಣ ಗ್ರಾಮಕ್ಕೆ  ಶೀಘ್ರವಾಗಿ ಬಸ್ ಸೌಕರ್ಯ ಕಲ್ಪಿಸಬೇಕೆಂದು, ರೈತ ಮುಖಂಡರು ಹಾಗೂ ಗ್ರಾಮಸ್ಥರು ಸಂಸ್ಥೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕ.ರಾ.ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಎಂ.ಬಸವರಾಜ ನೇತೃತ್ವದಲ್ಲಿ ಹಕ್ಕೊತ್ತಾಯ ಮಾಡಲಾಗಿದೆ,ರೈತ ಮುಖಂಡರಾದ ಜಂಗಮ ಸೋವೇನಹಳ್ಳಿ ನಂದಿ ಜಂಬಣ್ಣ,  ಕೈವಲ್ಯಾಪುರ ವಿ.ನಾಗರಾಜ,ಬಿಬಿ ತಾಂಡದವರಾದಎಸ್.ಭಾಷಸಾಬ್,ಪಾಂಡುರಂಗನಾಯ್ಕ,ನಾರಾಯಣ ನಾಯ್ಕ, ನೇಮಿರಾಜನಾಯ್ಕ,ಕೆ.ನಿರಂಜನ,ಪಿ.ಭಾಷಾ ಸೇರಿದಂತೆ ಮತ್ತಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು