ಇತ್ತೀಚಿನ ಸುದ್ದಿ
ಕಾರ್ಮಿಕರಿಗೆ ಅವಾಚ್ಯ ಪದಗಳಿಂದ ನಿಂದನೆ: ಕೃಷ್ಣ ಸಕ್ಕರೆ ಕಾರ್ಖಾನೆ ಮುಖ್ಯ ವ್ಯವಸ್ಥಾಪಕರ ವಿರುದ್ಧ ಭಾರೀ ಆಕ್ರೋಶ; ಪ್ರತಿಭಟನೆ
09/09/2021, 19:12
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಹಲ್ಯಾಳ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ನಿಮ್ಮನ್ನು ಆದಷ್ಟು ಬೇಗ ಕೆಲಸದಿಂದ ತೆಗೆಯುತ್ತೇವೆ ಏನು ಮಾಡುತ್ತೀರಿ ಎಂದು ಧಮ್ಕಿ ಹಾಕಿದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಪ್ರತಿಭಟನಾನಿರತ ಕಾರ್ಮಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷರು ಮಾತನಾಡಿ, ನಾವು ಸುಮಾರು 20 ವರ್ಷದಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದುವರೆಗೂ ನಮ್ಮ ಉದ್ಯೋಗವನ್ನು ಕಾಯಂಗೊಳಿಸಿಲ್ಲ. ಮೂರು ತಿಂಗಳ ನಮ್ಮ ಸಂಬಳ ಸಿಗುತ್ತಿಲ್ಲ. ಕೇಳಿದರೆ ನಿಮ್ಮನ್ನು ಕೆಲಸದಿಂದ ವಜಾ ಮಾಡುತ್ತೇವೆ ಎಂದು ಧಮಕಿ ಹಾಕುತ್ತಾರೆ ಎಂದರು.
ಕೃಷ್ಣ ಸಕ್ಕರೆ ಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜಿ. ಪಾಟೀಲ್ ಅವರು ಕಾರ್ಮಿಕರಿಗೆ ಧಮ್ಕಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆ ಕಾರನ್ನು ಮನವೊಲಿಸಲು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಯತ್ನಿಸಿದರು. ಪರಪ್ಪ ಸವದಿ ಅವರು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹೋದರ. ಕೃಷ್ಣ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಮಾತಿಗೂ ಕ್ಯಾರೇ ಅನ್ನದ ಪ್ರತಿಭಟನಾಕಾರರು.