1:46 PM Wednesday1 - January 2025
ಬ್ರೇಕಿಂಗ್ ನ್ಯೂಸ್
ಸೋಲಾರ್ ಅಳವಡಿಸಿದರೆ ಕೇಂದ್ರದಿಂದ ಸಬ್ಸಿಡಿ: ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್… ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇ. 18ರಷ್ಟು ಜಿಎಸ್ ಟಿ ರದ್ದತಿ ಕೋರಿ ಶೀಘ್ರವೇ… ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ; ಡ್ರೋನ್ ಬಳಕೆ: ಸಚಿವ ಈಶ್ವರ… ಸಹಜ ಹೆರಿಗೆಗೆ ಆದ್ಯತೆ ನೀಡಿ: ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ: ನಕ್ಸಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ಬೈಕಿನ ಹಿಂದೆ ನಿಂತು ಜ್ವಾಲಿ ರೈಡ್ ಮಾಡಿದ ಮಲೆನಾಡಿನ ಶ್ವಾನ: ವೀಡಿಯೋ ವೈರಲ್ ಸಾಹಿತ್ಯ ಅನುವಾದ ಸೇತುವೆ ಕಟ್ಟುವ ಕೆಲಸದಂತೆ: ಚಿಂತಕ ರಹಮತ್ ತರೀಕೆರೆ ಪ್ರತಿಪಾದನೆ ಕೆಪಿಎಸ್ ಸಿ ಮರುಪರೀಕ್ಷೆಯಲ್ಲೂ ಎಡವಟ್ಟು: ಕಾಂಗ್ರೆಸ್ ಸರಕಾರ ವಿರುದ್ದ ಪ್ರತಿಪಕ್ಷದ ನಾಯಕ ಆರ್.… ಕೋಲಾರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್ ರವಿ ಅಧಿಕಾರ ಸ್ವೀಕಾರ ಕೊಕ್ಕಡ ದೇಗುಲದ ಅಚ್ಚುಮೆಚ್ಚಿನ ಶ್ಯಾಮ ಇನ್ನು ನೆನಪು ಮಾತ್ರ: ಅಲ್ಪಕಾಲದ ಅನಾರೋಗ್ಯದಿಂದ ದೇವರಪಾದ…

ಇತ್ತೀಚಿನ ಸುದ್ದಿ

ಕಾರವಾರ: ಕೊರೊನಾ ಕರ್ಫ್ಯೂ ನಿಯಮಗಳಿಗೆ ಮತ್ತಷ್ಟು ಕ್ರಮ ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿ ಆದೇಶ 

23/05/2021, 20:01

ಕಾರವಾರ(reporterkarnataka news): ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಮೇ 24 ರಿಂದ ಜೂನ್ 7ರವರೆಗೆ ಸರಕಾರ ವಿಧಿಸಿರುವ ಕರ್ಫ್ಯೂ ನಿಯಮಗಳಿಗೆ ಮತ್ತುಷ್ಟು ಕಠಿಣ ಕ್ರಮಗಳನ್ನು ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿ ಭಾನುವಾರ ಆದೇಶ ಹೊರಡಿಸಿದ್ದಾರೆ

ಮೇ 24 ರ ಬೆಳಗ್ಗೆ 6 ಗಂಟೆಯಿಂದ ಜೂನ್ 7 ರ ಬೆಳಗ್ಗೆ 6 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತರಕಾರಿ, ದಿನಸಿ ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಅಂಗಡಿಗಳಿಗೆ ತೆರಳಿ ಖರೀದಿ ಮಾಡಲು ಅವಕಾಶವಿದೆ. ಉಳಿದ ದಿನಗಳಲ್ಲಿ ಮನೆಮನೆಗೆ ಪೂರೈಕೆ ಮಾಡಲಾಗುತ್ತದೆ.

ಮದುವೆ ಕಾರ್ಯಗಳಿಗೆ ಅನುಮತಿ ನೀಡಲಾಗುವುದಿಲ್ಲ. ಸೂಕ್ತ ಗುರುತಿನ ಚೀಟಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು